ಕೊರೊನಾ ಜೊತೆ ಹೋರಾಡಿ ಗೆದ್ದ ಸಂಸದ ಜಿಎಂ ಸಿದ್ದೇಶ್ವರ್ ಪುತ್ರಿ

ಗುರುವಾರ, 9 ಏಪ್ರಿಲ್ 2020 (10:08 IST)
ದಾವಣಗೆರೆ : ಕೊರೊನಾ ಸೋಂಕಿಗೆ ಒಳಗಾಗಿದ್ದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್ ಪುತ್ರಿ ಅಶ್ವಿನಿ ಇದೀಗ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಗಯಾನಾ ದೇಶದಿಂದ ಮಾರ್ಚ್ 20ರಂದು ಭಾರತಕ್ಕೆ ಬಂದಿದ್ದ ಅಶ್ವಿನಿ ಕ್ವಾರಂಟೈನಲ್ಲಿದ್ದರು. ಬಳಿಕ ಕೊರೊನಾ ಟೆಸ್ಟ್ ಮಾಡಿಸಿದಾಗ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ತಕ್ಷಣ ಅವರನ್ನು ಎಸ್ ಎಸ್ ಆಸ್ಪತ್ರೆಗೆ ದಾಖಲಿಸಿ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಅವರು ಕೊರೊನಾದಿಂದ ಗುಣಮುಖರಾಗಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ