ಮಂಡ್ಯ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್ ಗೆ ನೋಟೀಸ್ ಜಾರಿಮಾಡಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಂಜುಶ್ರೀ ಅವರಿಂದ ನೋಟೀಸ್ ಜಾರಿ ಮಾಡಲಾಗಿದೆ.
ಚುನಾವಣಾಧಿಕಾರಿ ಮಂಜುಶ್ರೀ ವಿರುದ್ಧ ಖಾಸಗಿ ಸುದ್ದಿ ವಾಹಿನಿಯಲ್ಲಿ ಸುಮಲತಾ ಆರೋಪ ಮಾಡಿದ್ರು. ಸಿಎಂ ಕುಮಾರಸ್ವಾಮಿ ಅವ್ರು ಮಂಡ್ಯ ಡಿಸಿಯನ್ನ ಮನೆಗೆ ಕರೆಸಿ ಮಾತನಾಡಿದ್ದಾರೆ. ನಾಮಿನೇಷನ್ ಪೇಪರ್ ನಲ್ಲಿ ಎರರ್ ಇದ್ದು, ಆ ತಪ್ಪನ್ನ ಮುಚ್ಚಿಡೋಕೆ ಅಫಿಷಿಯಲ್ ಮಿಷನರಿ ವರ್ಕ್ ಮಾಡ್ತಿದೆ ಅಂತ ಆರೋಪ ಮಾಡಿದ್ರು. ಇದು ನನ್ನ ವ್ಯಕ್ತಿತ್ವಕ್ಕೆ ಘಾಸಿ ಆಗಿದೆ.
ಊಹಾಪೋಹದ ಮಾಹಿತಿಯನ್ನು ಅಧಿಕೃತ ಎಂದು ಹೇಳಿರುವುದು ಪ್ರಮಾಣಿಕ ಹಾಗೂ ಪಾರದರ್ಶಕ ಆಡಳಿತ ನಡೆಸಿದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿದೆ. ಸಮಾಜದ ದೃಷ್ಟಿಯಲ್ಲಿ ತಪ್ಪಿತಸ್ಥರೆಂದು ಬಿಂಬಿಸಿ ಜಿಲ್ಲೆಯ ಎಲ್ಲಾ ಅಧಿಕಾರಿ ವೃಂದಕ್ಕೆ ಅಪಮಾನ ಮಾಡಿದ್ದೀರಿ.
ಈ ಹಿನ್ನಲೆಯಲ್ಲಿ ಐಪಿಸಿ ಸೆಕ್ಷನ್ 180 ರ ಅಡಿಯಲ್ಲಿ ನಿಮ್ಮ ಮೇಲೆ ಏಕೆ ಕ್ರಮಕೈಗೊಳ್ಳಬಾರದೆಂದು ನೋಟೀಸ್ ನಲ್ಲಿ ತಿಳಿಸಲಾಗಿದೆ. ನೋಟೀಸ್ ತಲುಪಿದ ಒಂದು ದಿನದಲ್ಲಿ ಸಮಜಾಯಿಷಿ ನೀಡಲು ಸುಮಲತಾಗೆ ಡಿಸಿ ಸೂಚನೆ ನೀಡಿದ್ದಾರೆ.