ತುಮಕೂರಿನಲ್ಲಿ ಅನ್ಯಾಯವಾಗಿದೆ ಅಂತ ಮತ್ತೆ ಮತ್ತೆ ಡಿಸಿಎಂ ಹೇಳ್ತಿರೋದ್ಯಾಕೆ?
ಶುಕ್ರವಾರ, 29 ಮಾರ್ಚ್ 2019 (13:19 IST)
ಮೈತ್ರಿ ಸರಕಾರದ ನಿರ್ಧಾರದಿಂದಾಗಿ ಉಭಯ ಪಕ್ಷಗಳಲ್ಲಿ ಟಿಕೆಟ್ ಗೊಂದಲ ಮುಗಿದರೂ, ಅದರ ಪರಿಣಾಮ ಇನ್ನೂ ಮುಂದುವರಿಯುತ್ತಲೇ ಇದೆ.
ಡಿಸಿಎಂ ಪರಮೇಶ್ವರ್ ಹೇಳಿಕೆ ನೀಡಿದ್ದು, ತುಮಕೂರು ಬಿಟ್ಟುಕೊಟ್ಟಿದ್ದು ನಮಗೆ ಅನ್ಯಾಯವಾಗಿದೆ. ಮುದ್ದಹನುಮೇಗೌಡರು ಮೋದಿ ಅಲೆಯಲ್ಲೂ ಅವರು ಗೆದ್ದು ಬಂದರು. ಕೆಲಸ ಮಾಡಿ ಜನಮನ್ನಣೆಯನ್ನ ಗಳಿಸಿದ್ದರು.
ಈ ಭಾರಿ ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿತ್ತು. ಆದರೆ ತುಮಕೂರು ಜೆಡಿಎಸ್ ಗೆ ಬಿಟ್ಟಿದ್ದು ಆಘಾತವಾಗಿತ್ತು. ಇದರಿಂದ ಅವರು ನಾಮಪತ್ರ ಸಲ್ಲಿಸಿದ್ದರು ಎಂದರು.
ಅವರ ಬೆಂಬಲಿಗರು, ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸಲ್ಲಿಸಿದ್ದರು. ಹೀಗಾಗಿ ಅವರ ಮನವೊಲಿಸುವ ಕೆಲಸ ಮಾಡಿದ್ದೇವೆ. ಅವರನ್ನ ರಾಜಕೀಯ ರಕ್ಷಣೆ ಮಾಡುವ ಜವಾಬ್ದಾರಿ ನೀಡಿದ್ದಾರೆ. ನಮ್ಮ ಪಕ್ಷದ ವರಿಷ್ಠರು ನೀಡಿದ್ದಾರೆ
ಹೀಗಾಗಿ ನಾಮಪತ್ರ ಹಿಂತೆಗೆಯಲು ಮನವಿ ಮಾಡಿದ್ದೇವೆ ಎಂದಿದ್ದಾರೆ.