ಮೊದಲ ರಾತ್ರಿ ವಾಂತಿ ಮಾಡಿದ್ದಾಳೆಂದು ಪತ್ನಿಗೆ ಕನ್ಯತ್ವಪರೀಕ್ಷೆ ಮಾಡಿಸಿದ ಪತಿ..ನಂತ್ರ?

ಶುಕ್ರವಾರ, 29 ಮಾರ್ಚ್ 2019 (19:58 IST)
ಉತ್ತರ ಕರ್ನಾಟಕಕ್ಕೆ ಸೇರಿದ 29 ವರ್ಷ ವಯಸ್ಸಿನ (ಶರತ್) ಮತ್ತು 26 ವರ್ಷ ವಯಸ್ಸಿನ ರಕ್ಷಾ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮುಖಾಂತರ ಪರಿಚಯವಾಗಿತ್ತು. ಕೆಲ ಕಾಲ ಇಬ್ಬರು ಫೋನ್‌ನಲ್ಲಿ ಮಾತನಾಡುತ್ತಾ ಪರಸ್ಪರ ಪ್ರೇಮ ನಿವೇದ ಮಾಡಿಕೊಳ್ಳುತ್ತಿದ್ದರು. ಕಳೆದ 2018ರಲ್ಲಿ ವಿವಾಹವಾಗಲು ನಿರ್ಧರಿಸಿದ್ದರು. ಆದರೆ, ವಿವಾಹಕ್ಕೆ 15 ದಿನ ಮುಂಚೆ ರಕ್ಷಾ ತಾಯಿ ಇಹಲೋಕ ತ್ಯಜಿಸಿದ್ದಾರೆ. ವಿವಾಹದ ಸಂದರ್ಭದಲ್ಲಿಯೇ ತಾಯಿಯ ಮರಣ ರಕ್ಷಾಳನ್ನು ಕುಗ್ಗುವಂತೆ ಮಾಡಿದೆ. ನಂತರ ಕೆಲ ದಿನಗಳ ನಂತರ ವಿವಾಹ ಕಾರ್ಯಕ್ರಮ ನಡೆದಿದೆ. ಆದರೆ, ಮೊದಲ ರಾತ್ರಿಯಂದು ರಕ್ಷಾಗೆ ಅನಾರೋಗ್ಯವಾಗಿ ವಾಂತಿ ಮಾಡಿಕೊಂಡಿದ್ದಾಳೆ. ಇದರಿಂದ ಅನುಮಾನಗೊಂಡ ಪತಿ ಶರತ್ ಆಕೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕನ್ಯತ್ವ ಪರೀಕ್ಷೆ ಮಾಡಿಸಿದ್ದಾನೆ.
ಕೆಲ ದಿನಗಳ ನಂತರ ವೈದ್ಯರು ರಕ್ಷಾಗೆ ಕನ್ಯತ್ವ ಪರೀಕ್ಷೆ, ಗರ್ಭಿಣಿ ಪರೀಕ್ಷೆ ನಡೆಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ಬೇಸರಗೊಂಡ ರಕ್ಷಾ ಪತಿಗೆ ತನ್ನ ಮೇಲೆ ನಂಬಿಕೆ ಇಲ್ಲದಿರುವುದರಿಂದ ಪರೀಕ್ಷೆ ನಡೆಸಿದ್ದಾನೆ. ಇಂತಹ ಅನುಮಾನ ಪ್ರಾಣಿಯೊಂದಿಗೆ ಬಾಳುವುದರೊಂದಿಗೆ ಅರ್ಥವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾಳೆ. ಪತಿಯನ್ನು ತೊರೆದು ತನ್ನ ಸಹೋದರಿಯ ಮನೆಗೆ ತೆರಳಿ ಅಲ್ಲಿಯೇ ವಾಸವಾಗಿದ್ದಾಳೆ.
 
ಕೂಡಲೇ ಕೌಟಂಬಿಕ ನ್ಯಾಯಾಲಯಕ್ಕೆ ದೂರು ನೀಡಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ. ಪತಿ ಕೂಡಾ ವಿಚ್ಚೇದನ ಅರ್ಜಿ ಸಲ್ಲಿಸಿದ್ದಾನೆ. ಇಬ್ಬರನ್ನು ಕರೆಸಿ ಕೌನ್ಸಿಲಿಂಗ್ ನಡೆಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಪತಿ ಮಾಡಿದ ಕೃತ್ಯದ ಬಗ್ಗೆ ರಕ್ಷಾ ಕೌನ್ಸಿಲಿಂಗ್ ಮಾಡುವವರ ಮುಂದೆ ಬಾಯಿ ಬಿಟ್ಟಿದ್ದಾಳೆ. ಇದರಿಂದ ಮತ್ತಷ್ಟು ವಿಚಾರಣೆ ನಡೆಸಿದ ನ್ಯಾಯಾಲಯ ದಂಪತಿಗಳಿಗೆ ವಿಚ್ಚೇದನ ನೀಡಿ ಆದೇಶ ಹೊರಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ