ಪೊಲೀಸರ ವೇತನ ಹೆಚ್ಚಳ ಬಗ್ಗೆ ಪರಿಶೀಲಿಸುತ್ತೇನೆ: ಡಿಸಿಎಂ ಪರಮೇಶ್ವರ್
ರಾಜ್ಯ ಗೃಹ ಇಲಾಖೆ ಸಚಿವನಾಗಿ ಇದೀಗ ತಾನೇ ಅಧಿಕಾರ ವಹಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಪರಿಶೀಲಿಸುತ್ತೇನೆ ಎಂದು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಿಳಿಸಿದ್ದಾರೆ.
ಹಿಂದೆ ನಾನು ಗೃಹ ಸಚಿವನಾಗಿದ್ದಾಗಲೇ ಈ ಪ್ರಸ್ತಾವ ಇತ್ತು. ಈಗ ಕೆಲವು ತಿಂಗಳ ಬಿಡುವಿನ ನಂತರ ಇಲಾಖೆಗೆ ಬಂದಿದ್ದೇನೆ. ಕೆಲವು ದಿನಗಳ ಬಳಿಕ ಈ ವಿಚಾರ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.