ಸಾಲುಮರದ ತಿಮ್ಮಕ್ಕ ಸಾಧನೆ ರಾಜ್ಯಕ್ಕೆ ಹೆಮ್ಮೆ ಎಂದ ಡಿಸಿಎಂ

ಶನಿವಾರ, 29 ಜೂನ್ 2019 (17:06 IST)
ಸಾಲುಮರದ ತಿಮ್ಮಕ್ಕ ಅವರು ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ ಅವರು ಮನುಕುಲಕ್ಕೆ ಸಂದೇಶ ಸಾರಿದ್ದಾರೆ. ಹೀಗಂತ ಡಿಸಿಎಂ ಹೇಳಿದ್ದಾರೆ.

ಮುಂದಿನ ಪೀಳಿಗೆ ಪರಿಸರ ರಕ್ಷಣೆ ಮಾಡುವತ್ತ ಜಾಗೃತರಾಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ  ಹೇಳಿದ್ರು. ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್‌ನ್ಯಾಷನಲ್‌ ಫೌಂಡೇಶನ್‌ ಸಹಯೋಗದಲ್ಲಿ ಸಾಲುಮರದ ತಿಮ್ಮಕ್ಕ ನ್ಯಾಷನಲ್‌ ಗ್ರೀನರಿ ಅವಾರ್ಡ್‌ 2018-19ನೇ ಸಾಲಿನ ಪ್ರಶಸ್ತಿ ಪ್ರದಾನ ಹಾಗೂ ಡಾ.ಜಿ. ಪರಮೇಶ್ವರ ದಂಪತಿಗೆ ಅಭಿನಂದನೆ ಸಲ್ಲಿಸಲಾಯಿತು.

ಬಳಿಕ ಮಾತನಾಡಿದ ಅವರು, ಸಾಲು ಮರದ ತಿಮ್ಮಕ್ಕ ಅವರು ಮಕ್ಕಳಂತೆ ಮರಗಳನ್ನು ಬೆಳೆಸಿ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದರು. ಪ್ರಸ್ತುತ, 100 ಜನ ಪ್ರತಿಭಾವಂತ, ಪ್ರಭಾವಿ ಮಹಿಳೆಯರಲ್ಲಿ ಸಾಲುಮರದ ತಿಮ್ಮಕ್ಕ ಅವರು ಒಬ್ಬರು. ಇದು ರಾಜ್ಯಕ್ಕೆ ಹೆಮ್ಮೆಯ ವಿಚಾರ ಎಂದರು.

ರಾಜ್ಯದಲ್ಲಿ ಶೇ 22.6 ರಷ್ಟು ಮಾತ್ರ ಹಸಿರು ಇದೆ. ಹಸಿರು ಕಡಿಮೆ ಆದಷ್ಟು ಮಳೆಯು ಸಹ ಕ್ರಮೇಣ ಕಡಿಮೆ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಗಾಳಿಯು ಸಹ ಕಲುಷಿತಗೊಂಡಿದೆ. ಇಲ್ಲಿಯೂ ಸಹ ಕಲುಷಿತಗೊಳ್ಳುವ ಹಾದಿಯಲ್ಲಿದೆ. ಪರಿಸರ ರಕ್ಷಣೆ ಮಾಡುವ ಸಂದೇಶ ಮುಂದಿನ ಪೀಳಿಗೆಗೆ ನೀಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಉಸಿರಾಡುವ ಗಾಳಿಯು ವಿಷಯುಕ್ತ ವಾಗಲಿದೆ ಅಂತ ಡಿಸಿಎಂ ಪರಮೇಶ್ವರ್ ಹೇಳಿದ್ರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ