ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕಿ ಕುಸಮಲತಾಗೆ ಎಸಿಬಿ ಶಾಕ್

ಗುರುವಾರ, 26 ಆಗಸ್ಟ್ 2021 (19:04 IST)
ಬೆಂಗಳೂರು: ಡಿಡಿಎಲ್ಆರ್ (ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕರು) ಕುಸುಮಲತಾ ರ ನಗರದಲ್ಲಿರುವ ಮನೆ ಕಚೇರಿಗಳ ಮೇಲೆ ಎಸಿಬಿ ಯಿಂದ ರೇಡ್ ಗುರುವಾರ ನೆಡೆದಿರುವುದು ಬೆಳಕಿಗೆ ಬಂದಿದೆ. ಅಕ್ರಮ ಭೂ ಪರಿವರ್ತನೆ ಬಗೆಗೆ ದಾಖಲಾತಿ ಲಭ್ಯವಾದ ಹಿನ್ನಲೆಯಲ್ಲಿ ದಾಳಿ ನೆಡೆಸಲಾಗಿದೆ ಎನ್ನಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಸಂತಪುರ ವಿಲೇಜ್ ನ ಸರ್ವೇ ನಂ.17
ರಲ್ಲಿರುವ 29 ಗುಂಟೆ ಖರಾಬು ಜಮೀನು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ತೆರಿಗೆ ಕಟ್ಟಬೇಕಾದ ಆಸ್ತಿಯಾಗಿತ್ತು.
ಅಕ್ರಮಾಗಿ ಭೂ ಪರಿವರ್ತನೆ ಮಾಡಿದ ಜಮೀನು ಮಾಲಿಕರಾದ ವೇಣುಗೋಪಾಲ್ ಮತ್ತು ಮಧ್ಯವರ್ತಿ ಶಾಂತಕಮಾರ್ ಜೊತೆ ಶಾಮೀಲಾದ ಕುಸುಮಲತಾ ಹಳೆಯ ಹೈಕೋರ್ಟ್ ಆದೇಶದ ಹೆಸರಿನಲ್ಲಿ ಭೂ ಪರಿವರ್ತನೆಗೆ ಮುಂದಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿಡಿಎಲ್ಆರ್ ಕುಸುಮಲತಾ ಮೇಲೆ ಸರ್ಕಾರಕ್ಕೆ ಬರಬೇಕಾಗಿದ್ದ ತೆರಿಗೆ ವಂಚನೆ ಆರೋಪ ಹೊರಿಸಲಾಗಿದೆ. ಅಕ್ರಮಾಗಿ ಭೂ ಪರಿವರ್ತನೆಯ ಸಂಬಂಧ ಲಕ್ಷಾಂತರ ರೂಪಾಯಿ ಲಂಚ ಪಡೆದು ಅಕ್ರಮ ಭೂ ಪರಿವರ್ತನೆ ಮಾಡಿರುವ ಕುರಿತು ಎಸಿಬಿ ದಾಳಿಯಲ್ಲಿ ದಾಖಲೆಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ