ದೀಪಕ್ ರಾವ್ ಹತ್ಯೆ; ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ ಹೆಚ್ ಡಿ ಕುಮಾರಸ್ವಾಮಿ
ಸೋಮವಾರ, 8 ಜನವರಿ 2018 (13:16 IST)
ಮೈಸೂರು : ಮಂಗಳೂರಿನಲ್ಲಿ ದೀಪಕ್ ರಾವ್ ಅವರ ಹತ್ಯೆಗೆ ಸಂಬಂಧಿಸಿದ್ದಂತೆ ಮೈಸೂರಿನಲ್ಲಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
‘ಬಿಜೆಪಿಯವರು ದೀಪಕ್ ರಾವ್ ಶವಯಾತ್ರೆ ಮಾಡಿದರು. ಆದರೆ ಬಶೀರ್ ಕುಟುಂಬದವರು ಶವಯಾತ್ರೆ ನಡೆಸಲು ಪ್ರಬುದ್ಧತೆ ಮೆರೆದರು’ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ‘ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಮಂಗಳೂರಿನ ಕಾರ್ಪೋರೇಟರ್ ಕೈವಾಡ ವಿದೆ’ ಎಂದು ಕುಮಾರಸ್ವಾಮಿ ಅವರು ಗಂಭೀರವಾದ ಆರೋಪ ಮಾಡಿದ್ದಾರೆ.
‘ಮಂಗಳೂರು ಗಲಭೆ ವಿಚಾರದಲ್ಲಿ 2 ರಾಷ್ಟ್ರೀಯ ಪಕ್ಷಗಳು ರಾಜಕೀಯ ಮಾಡುತ್ತಿದೆ. ದೀಪಕ್ ಹಂತಕರ ಬಂಧನದಲ್ಲಿ ಮುಸ್ಲಿಂಮರೇ ನೆರವಾಗಿದ್ದಾರೆ. ಕಾಂಗ್ರೆಸ್ ಹಾಗು ಬಿಜೆಪಿಗೆ ಜನಹಿತಕ್ಕಿಂತ ಜಾತ್ಯಾತೀತವಾದ, ಕೋಮುವಾದವೇ ಮುಖ್ಯ. ಹೀಗಾಗಿ ಜೆಡಿಎಸ್ ಸೌಹಾರ್ದ ಯಾತ್ರೆ ಮುಂದೂಡಲಾಗಿದೆ’ ಎಂದು ಮೈಸೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ