ರಾಜ್ಯದಲ್ಲಿ ಬಿಯರ್ ಗೆ ಡಿಮ್ಯಾಂಡ್ ಶುರು

ಗುರುವಾರ, 7 ಡಿಸೆಂಬರ್ 2023 (14:05 IST)
ಚಳಿಗಾಲ ಶುರುವಾಗ್ತಿದ್ದಂತೆ ಮಧ್ಯಪ್ರಿಯರು ಬಿಯರ್ ಮೊರೆ ಹೋಗಿದ್ದಾರೆ.ಬಿಯರ್ ಹೆಚ್ಚೆಚ್ಚು ಕುಡಿದು ಸರ್ಕಾರದ ಖಜಾನೆ ಎಣ್ಣೆಪ್ರಿಯರು ತುಂಬಿಸ್ತಿದಾರೆ .ಬಿಯರ್ ಸೇಲ್‌ನಿಂದ ಕೋಟಿ ಕೋಟಿ ಅಬಕಾರಿ ಇಲಾಖೆ ಬಾಚಿದೆ.
 
ಕಳೆದ ಎಂಟು ತಿಂಗಳಿನಿಂದ ಶೇ.15.58 ರಷ್ಟು ಹೆಚ್ಚುವರಿ ಬಿಯರ್ ಮಾರಾಟವಾಗ್ತಿದೆ.ನವೆಂಬರ್ ತಿಂಗಳಲ್ಲೇ ಬಿಯರ್ ಶೇ.17ರಷ್ಟು ಹೆಚ್ಚು ಮಾರಾಟವಾಗ್ತಿದೆ.ಕಳೆದ ವರ್ಷ ನವೆಂಬರ್ ನಲ್ಲಿ 29.95 ಲಕ್ಷ ಬಿಯರ್ ಬಾಕ್ಸ್ ಮಾರಾಟವಾಗಿದೆ.ಈ ವರ್ಷ ನವೆಂಬರ್ ನಲ್ಲಿ 35.05 ಲಕ್ಷ ಬಾಕ್ಸ್ ಮಾರಾಟವಾಗಿದೆ.ದರ ಏರಿಕೆಯ ನಡುವೆಯೂ ಮಧ್ಯ ಮಾರಾಟ ಬಲು ಜೋರಾಗಿದೆ.ಬಿಯರ್ ಜೊತೆಗೆ ಇತರೆ ಲಿಕ್ಕರ್ ಮಾರಾಟದಲ್ಲೂ ಹೆಚ್ಚಳವಾಗಿದೆ.
 
ನವೆಂಬರ್ ನಲ್ಲಿ ಲಿಕ್ಕರ್ 0.43 ಶೇ.‌ ಮಾರಾಟ ಹೆಚ್ಚಳವಾಗಿದೆ.2023-24ರಲ್ಲಿ ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ಟಾರ್ಗೆಟ್ ಆಗಿದೆ.ಕಳೆದ ಎಂಟು ತಿಂಗಳಿನಲ್ಲಿ 22,500 ಕೋಟಿ ಆದಾಯ ಸಂಗ್ರಹವಾಗಿದೆ.ನವೆಂಬರ್ ತಿಂಗಳಲ್ಲಿ ಬಿಯರ್ ಮಾರಾಟ ದಾಖಲೆ ಬರೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ