ಆ.15ರೊಳಗೆ ಉಸ್ತುವಾರಿ ನೇಮಕಕ್ಕೆ ಆಗ್ರಹ

ಮಂಗಳವಾರ, 31 ಜುಲೈ 2018 (16:16 IST)
ಉ ಡುಪಿ ಜಿಲ್ಲೆಗೆ ಉಸ್ತುವಾರಿ ನೇಮಕ ಮಾಡುವಲ್ಲಿ ಸಮಿಶ್ರ ಸರಕಾರದಲ್ಲಿ ಗೊಂದಲವಿದೆ. ಸರಕಾರ ತಮ್ಮೊಳಗಿನ ಕಚ್ಚಾಟವನ್ನು ದೂರ ಸರಿಸಿ ಉಡುಪಿ ಜಿಲ್ಲೆಗೆ ಶೀಘ್ರವಾಗಿ ಉಸ್ತುವಾರಿ ನೇಮಕ ಮಾಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಆಗ್ರಹ ಮಾಡಿದ್ದಾರೆ.

ಉಡುಪಿ ಜಿಲ್ಲೆ ಪ್ರಗತ್ತಿಯತ್ತ ದಾಪುಗಾಲು ಹಾಕುತ್ತಿರುವ ಜಿಲ್ಲೆ. ಹೀಗಾಗಿ ಉಡುಪಿಗೆ ಉಸ್ತುವಾರಿಯ ಅಗತ್ಯವಿದೆ. ಆದ್ರೆ ವಿಪರ್ಯಾಸ ಎಂದ್ರೆ ಸರಕಾರ ಈವರೆಗೆ ಜಿಲ್ಲೆಗೆ ಉಸ್ತುವಾರಿಯ ನೇಮಕ ಮಾಡಿಲ್ಲ. ಉಸ್ತುವಾರಿ ನೇಮಕ ಮಾಡುವಲ್ಲಿ ಸಮಿಶ್ರ ಸರಕಾರದಲ್ಲಿಯೇ ಗೊಂದಲವಿದೆ. ಉಸ್ತುವಾರಿ ನೇಮಕದ ಬಗ್ಗೆ   ಇರುವ ಗೊಂದಲವನ್ನು 2 ಪಕ್ಷಗಳು ಸರಿಪಡಿಸಿ ಜಿಲ್ಲೆಯ ಅಬಿವೃದ್ದಿಯ ಹಿತ ದೃಷ್ಟಿಯಲ್ಲಿ ಉಸ್ತುವಾರಿಯನ್ನು ಆಗಸ್ಟ್ 15 ರೊಳಗಾಗಿ ನೇಮಕ ಮಾಡಬೇಕು. ಕನಿಷ್ಠ ಪಕ್ಷ ಅಗಸ್ಟ್ 15 ರಸ್ವಾತಂತ್ರ್ಯ ದಿನಾಚರಣೆಯ  ಕಾರ್ಯಕ್ರಮದಲ್ಲಿ ಭಾಗವಹಿಸಲು ಆದ್ರೂ ಉಸ್ತುವಾರಿಯ ನೇಮಕವನ್ನು ಸರಕಾರ ಮಾಡಬೇಕು ಎಂದು ವಂಗ್ಯ ಮಾಡಿದ್ರು. 

 
ಸರಕಾರದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ  ಅನುಷ್ಠಾನಕ್ಕೆ ತರಲು ಸಿಎಂ ಕುಮಾರಸ್ವಾಮಿ ವಿಫಲರಾಗಿದ್ದಾರೆ. ಸರಕಾರದ ಆರೋಗ್ಯ ಭಾಗ್ಯಗಳು ಬಡವರ ಪಾಲಿಗೆ ನುಂಗಲಾರದ ತುತ್ತಾಗಿದೆ. ಆರೋಗ್ಯ ಕಾರ್ಡು ಯೋಜನೆಯ ಅನುಷ್ಠಾನದಲ್ಲಿ ಗೊಂದಲವಿದೆ. ಅನಾರೋಗ್ಯ ಪೀಡಿತರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಅನುಮತಿ ಪಡೆದು ಖಾಸಗೀ ಆಸ್ಪತ್ರೆಗೆ ದಾಖಲಾಗುವ ಹೊಸ ನಿಯಮ ಜಾರಿಗೆ ತಂದಿದೆ. ಈ ಮೂಲಕ ಅನಾರೋಗ್ಯ ಪೀಡಿತರನ್ನು ಕೊಲ್ಲಲೆಂದು ಆರೋಗ್ಯ ಕಾಡು ಯೋಜನೆಯನ್ನು ಸರಕಾರ ಜಾರಿಗೆ ತಂದಿದೆ. 

ಸಮಿಶ್ರ ಸರಕಾರದಲ್ಲಿ ಸಮನ್ವಯ ಸಮಿತಿಯೊಂದು ರಚನೆಯಾಗಿದೆ. ಆದ್ರೆ ಸಮನ್ವಯ ಸಮಿತಿ ಗಲಾಟೆ ಸಮಿತಿ. ಸರಕಾರದಲ್ಲಿಯೇ ಭಿನ್ನಭಿಪ್ರಾಯ ಮೂಡಿಸುವವರೇ  ಈ ಸಮನ್ವಯ ಸಮಿತಿಯ ಸದಸ್ಯರು. ಬಜೆಟ್‍ನಲ್ಲಿ ಕೆಲವೇ ಜಿಲ್ಲೆಗಳಿಗೆ ಪ್ರಾಶ್ಯಸ್ತವನ್ನು ನೀಡಲಾಗಿದೆ. ಸಿ ಎಂ ಕುಮಾರಸ್ವಾಮೀ ಕೇವಲ ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತವಲ್ಲ.  ರಾಜ್ಯದ 30 ಜಿಲ್ಲೆಗಳಿಗೆ ಅವರು ಸಿ ಎಂ. ಬಜೆಟ್‍ನಲ್ಲಿ ಅನುದಾನ ವಂಚಿತವಾಗಿರುವ ಜಿಲ್ಲೆಗಳಿಗೆ ತಕ್ಷಣ ಬಜೆಟ್‍ನಲ್ಲಿ ಪೂರಕವಾದ ಅಂಶಗಳನ್ನು ಮರು ಸೇರಿಸಬೇಕು ಎಂದು ಒತ್ತಾಯ ಮಾಡಿದ್ರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ