ಶೀರೂರು ಶ್ರೀಗಳ ಸಾವಿನ ಅನುಮಾನಗಳಿಗೆ ಇಂದು ಬೀಳಲಿದೆಯಾ ತೆರೆ?!
ಶ್ರೀಗಳ ಮರಣೋತ್ತರ ಪರೀಕ್ಷಾ ವರದಿ ಇಂದು ಪೊಲೀಸರ ಕೈ ಸೇರಲಿದೆ ಎನ್ನಲಾಗಿದ್ದು, ಇದರಿಂದ ಪೊಲೀಸರಿಗೆ ಸಾವಿನ ನಿಖರ ಕಾರಣ ತಿಳಿಯಲಿದೆ. ಆದರೆ ಮರಣೋತ್ತರ ಪರೀಕ್ಷೆ ಬಗ್ಗೆ ಪೊಲೀಸರಿಂದ ಅಧಿಕೃತ ಹೇಳಿಕೆ ಬಂದಿಲ್ಲ.
ಆದರೆ ಕೆಲವು ಮೂಲಗಳ ಪ್ರಕಾರ ಮರಣೋತ್ತರ ವರದಿಯಲ್ಲಿ ಲಿವರ್, ಕಿಡ್ನಿಗೆ ಹಾನಿಯಾಗಿದೆ ಎಂದಷ್ಟೇ ಉಲ್ಲೇಖವಾಗಿದೆ. ವಿಷ ಪ್ರಾಷನದ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲ ಎನ್ನಲಾಗಿದೆ. ಹೀಗಾದರೆ ಮತ್ತೆ ಪೊಲೀಸರಿಗೆ ನಿಖರ ಕಾರಣ ಹುಡುಕುವ ತಲೆನೋವು ಶುರುವಾಗಲಿದೆ.