ಸರ್ಕಾರಿ ಬಸ್ ಗಳ ಪೂಜೆಗೆ ಹೆಚ್ಚುವರಿ ಹಣ ಬಿಡುಗಡೆಗೆ ಡಿಮ್ಯಾಂಡ್

ಗುರುವಾರ, 19 ಅಕ್ಟೋಬರ್ 2023 (17:00 IST)
ಸೋಮವಾರ ಆಯುಧ ಪೂಜೆ ಹಿನ್ನಲೆ ಸರ್ಕಾರಿ ಬಸ್ ಗಳ ಪೂಜೆಗೆ ಹೆಚ್ಚುವರಿ ಹಣ ಬಿಡುಗಡೆಗೆ ಡಿಮ್ಯಾಂಡ್ ಶುರುವಾಗಿದೆ.ಬೆಲೆ ಏರಿಕೆ ಹಿನ್ನೆಲೆ ನೌಕರರಿಂದ ಹೆಚ್ಚುವರಿ ಹಣಕ್ಕೆ ಒತ್ತಾಯ ಮಾಡಲಾಗ್ತಿದೆ.ಪ್ರತಿ ವರ್ಷ ಆಯುಧ ಪೂಜೆಗೆ ಜೀಪ್, ಕಾರ್ ಗೆ 40 ರೂ,  ಬಸ್ ಗಳಿಗೆ ತಲಾ 100 ರೂ. ಬಿಡುಗಡೆ ನಿಗಮಗಳು ಮಾಡುತ್ತಿತ್ತು.ಆದ್ರೆ ಈ ಬಾರಿ ಪ್ರತಿ ಬಸ್ ಗೆ 500 ರೂ. ಬಿಡುಗಡೆ ಮಾಡುವಂತೆ ನೌಕರರು ಒತ್ತಾಯ  ಮಾಡಿದ್ದಾರೆ.ಆಯುಧ ಪೂಜೆ ಸಂಭ್ರಮದಿಂದ ಆಚರಿಸಲು ಸಾರಿಗೆ ನಿಗಮದ ನೌಕರರ ತೀರ್ಮಾನ ಮಾಡಿದ್ದು,ಒಂದು ಬಸ್ ಗೆ ಸರಳವಾಗಿ ಪೂಜೆ ಮಾಡಲು ಬಾಳೆಕಂದು ತೆಂಗಿನಕಾಯಿ,ಕರ್ಪೂರ ,ಕುಂಕುಮ, ಬೂದು ಕುಂಬಳಕಾಯಿ ವಿಭೂತಿ ಅಗತ್ಯವಿದೆ.ಪ್ರತಿ‌ಬಾರಿ  ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ ಜಿಪುಣತನ ತೋರುತ್ತಿದ್ದಾರೆ ಮ ಹೀಗಾಗಿ ಈ ಬಾರಿ ಆಯುಧ ಪೂಜೆ ಸಂಭ್ರಮಕ್ಕೆ ಹೆಚ್ಚುವರಿ ಹಣ ನೀಡುವಂತೆ AITUC ಯಿಂದ ಪಟ್ಟುಹಿಡಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ