ಬಕ್ರೀದ್ ಶುರುವಾಗುವ ಮುನ್ನವೇ ಕುರಿಗಳಿಗೆ ಡಿಮ್ಯಾಂಡ್

ಭಾನುವಾರ, 3 ಜುಲೈ 2022 (20:44 IST)
ಸಿಲಿಕಾನ್ ಸಿಟಿಯ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ  ರಂಜಾನ್ , ಬಕ್ರೀದ್ ಸಮೀಪಿಸುತ್ತಿದ್ದಂತೆ ಕುರಿಗಳಿಂದ ತುಂಬಿರುತ್ತೆ. ಅಂದಹಾಗೆ ಈ ಜಾಗದಲ್ಲಿ ಕುರಿಗಳಿಗೆ ತುಂಬ ಡಿಮ್ಯಾಂಡ್ ಇರುತ್ತೆ. ಆದ್ರೆ ಈ ಬಾರಿ ಇನ್ನು ರಂಜಾನ್ ಶುರುವಾಗುವ ಮುನ್ನವೇ ಕುರಿಗಳಿಗೆ ಸಿಕ್ಕಪಟ್ಟೆ ಬೇಡಿಕೆ ಶುರುವಾಗಿದೆ.ಮುಸ್ಲಿಂ ಸಮುದಾಯದವರು ರಂಜಾನ್ , ಬಕ್ರೀದ್ ನ್ನ ಅದ್ಧೂರಿಯಾಗಿ ಆಚರಿಸುತ್ತಾರೆ. ಅಂದಹಾಗೆ  ಜುಲೈ 9 ಮತ್ತು 10 ರಂದು ಬಕ್ರೀದ್ ಹಬ್ಬ. ಹೀಗಾಗಿ ಒಂದುವಾರದ ಮುಂಚಿತವಾಗಿ ಬೇರೆ ಬೇರೆ ಜಿಲ್ಲೆಗಳಿಂದ ಕುರಿಗಳನ್ನ ಆಮದುಮಾಡಿಕೊಳ್ಳಲಾಗ್ತಿದೆ. ಕೆಲ ರೈತರು ಕುರಿಗಳನ್ನ ಮಾರಾಟ ಮಾಡಲು ಬೇರೆ ಬೇರೆ ಜಿಲ್ಲಿಗಳಿಂದ ಆಗಮಿಸುತ್ತಿದ್ದಾರೆ. ಸುಮಾರು 8 ಸಾವಿರದಿಂದ 1. 50 ಲಕ್ಷದ ವರೆಗೂ ಕುರಿಗಳ ಬೆಲೆ ಇದೆ. ವಿವಿಧ ತಳಿಯ ಕುರಿಗಳನ್ನ ಇಲ್ಲಿ ತಂದು ಮಾರಾಟ ಮಾಡಲಾಗುತ್ತೆ. ಈಗಾಗಲ್ಲೇ ಕುರಿಗಳನ್ನ ತೆಗೆದುಕೊಳ್ಳಲು ಜನರು ಮುಗ್ಗಿಬೀಳ್ತಿದ್ದಾರೆ.
ಬಕ್ರೀದ್ ಹಬ್ಬಕ್ಕೆ ಕುರಿಗಳನ್ನ ಸಾಮಾನ್ಯವಾಗಿ ಕೊಳ್ಳಲಾಗುತ್ತೆ. ಅದು ಎಷ್ಟೇ ಬೆಲೆ ಇದ್ರು ಕೊಂಡುಕೊಳ್ತಾರೆ. ಈಗ ಶುರುವಿನಲ್ಲೇ ಕುರಿಗಳ ಬೆಲೆ ಮಾತನಾಡಿಸುವಾಗಿಲ್ಲ. ಆಷ್ಟರ ಮಟ್ಟಿಗೆ ಹೆಚ್ಚಾಗಿದೆ. ಇನ್ನು ಕುರಿಗಳ ಮಾರಾಟದ ವ್ಯಾಪಾರ ಚನ್ನಾಗಿ ಆಗ್ತಿದ್ದು. ಜನರು ಕೂಡ ಈಗಲ್ಲೇ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಕುರಿಗಳ ಬೆಲೆ ಕಳೆದ ವರ್ಷಕ್ಕಿಂತ ಹೆಚ್ಚಿದ್ದು, ಬೆಲೆ ದುಪಟ್ಟು ಆಗಿದ್ರು ಜನರು ಮಾತ್ರ ಕೊಳ್ತಿದ್ದಾರೆ. ಇನ್ನು ಬೇರೆ ಬೇರೆ ಜಿಲ್ಲಿಗಳಿಂದ ವಿವಿಧ ತಳಿಯ ಕುರಿಗಳನ್ನ ರೈತರು ತೆಗೆದುಕೊಂಡು ಬರುತ್ತಿದ್ದಾರೆ. ಈ ಬಾರಿ ಬೆಲೆ ಹೆಚ್ಚಿದ್ರು ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.ಬಕ್ರೀದ್ ಶುರುವಾಗುವ ಮುನ್ನವೇ ಕುರಿಗಳ ಮಾರಾಟ ಜೋರಾಗಿದೆ. ಇನ್ನು ವಿವಿಧ ಬಗೆಯ ಕುರಿಗಳು ಈದ್ಗಾ ಮೈದಾನಕ್ಕೆ ಬರಲಿದೆ ಜುಲೈ 9 ಕ್ಕೆ ಇರುವ ಹಬ್ಬಕ್ಕೆ ಈಗಾಲ್ಲೇ ಬೆಲೆ ಹೆಚ್ಚಿದೆ. ಮುಂದೆ ಮತ್ತಷ್ಟು ಬೆಲೆ ಹೆಚ್ಚಾದ್ರು ಆಶ್ಚರ್ಯಪಾಡಬೇಕಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ