ಭಾರಿ ಕುತೂಹಲ ಮೂಡಿಸಿದ ಆರೋಗ್ಯ ಇಲಾಖೆಯ ಸಭೆ

ಮಂಗಳವಾರ, 13 ಜೂನ್ 2023 (16:03 IST)
ಆರೋಗ್ಯ ಇಲಾಖೆಯೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ಮಾಡಿದ್ದಾರೆ.ಕೋವಿಡ್ ಸಮಯದಲ್ಲಿ ಕಾರ್ಯ ನಿರ್ವಹಣೆಯ ಕುರಿತು,ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಾಗಿದೆ.ತನಿಖಾ ವರದಿಯ ಬಗ್ಗೆ ಗೃಹ ಸಚಿವ ಪರಮೇಶ್ವರ್ ಜೊತೆ ಚರ್ಚೆ  ನಡೆಸಿದ್ದು,ಪ್ರಕರಣ ತನಿಖೆ ಮಾಡಿಸುವ ಬಗ್ಗೆ  ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಕೋವಿಡ್ ಸಮಯದಲ್ಲಾದ ಹಗರಣಗಳನ್ನ ತನಿಖೆ ನಡೆಸುವ ಬಗ್ಗೆ ಸಿಎಂ ಜೊತೆ ಚರ್ಚೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಡೆಸಿದ್ದಾರೆ.ಈ ಹಿಂದೆ ಸದನದಲ್ಲಿ ಕೂಡ ಕಾಂಗ್ರೆಸ್ ನಾಯಕರು  ಕೋವಿಡ್ ಹಗರಣದ ವಿಷಯವಾಗಿ ಧ್ವಿನಿಯೆತ್ತಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ