ಬೆಂಗಳೂರು : ಕೋವಿಡ್ ಹಗರಣಗಳ ಬಗ್ಗೆ ತನಿಖೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಹಣಕಾಸು ವಿಭಾಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಬಿಜೆಪಿ ಅವಧಿಯಲ್ಲಿ ಕೋವಿಡ್ ವೇಳೆ ಎಷ್ಟು ವೈದ್ಯಕೀಯ ಸಲಕರಣೆ ಖರೀದಿ ಆಗಿತ್ತು, ಯಾವೆಲ್ಲ ಔಷಧಿ ಖರೀದಿ ಮಾಡಿದ್ರು ಅಂತಾ ವರದಿಯಲ್ಲಿ ತಿಳಿಸಲಾಗಿದೆ. ವಿಭಾಗವಾರು ಯಾವುದಕ್ಕೆ ಎಲ್ಲಾ ಹಣ ಖರ್ಚಾಗಿದೆ?. ಏನೆಲ್ಲಾ ಖರೀದಿ ಆಗಿದೆ ಎಂಬುದರ ಬಗ್ಗೆಯೂ ವಿವರಿಸಲಾಗಿದೆ. ಎನ್ ಹೆಚ್ ಎಂ, ಅಡ್ಮಿನ್ ವಿಭಾಗ, ಇಂಜಿನಿಯರಿಂಗ್ ವಿಭಾಗ, ಐಸಿಯು, ವೆಂಟಿಲೇಟರ್ ಖರೀದಿ ಸೇರಿದಂತೆ ವಿಭಾಗವಾರು ಪ್ರತ್ಯೇಕ ಪ್ರತ್ಯೇಕ ಬಿಲ್ ಗಳನ್ನ ಒಳಗೊಂಡ ವರದಿ ವರದಿ ಸಲ್ಲಿಕೆ ಮಾಡಲಾಗಿದೆ.
ಕಳೆದ ಬಾರಿ ಆರೋಗ್ಯ ಇಲಾಖೆಯಲ್ಲಿ ನಡೆದ ಸಭೆಯಲ್ಲಿ ಆಯುಕ್ತರು ಮೌಖಿಕವಾಗಿ ಮಾಹಿತಿ ನೀಡಿದ್ದರು. ಈ ವೇಳೆ ಮೌಖಿಕವಾಗಿ ಬೇಡ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಹೀಗಾಗಿ ಹಣಕಾಸು ವಿಭಾಗದಿಂದ ಆಡಿಟ್ ಮಾಡಿ ಕೋವಿಡ್ ಅವಧಿಯಲ್ಲಿ ಆಗಿರೋ ಖರ್ಚು ವೆಚ್ಚಗಳನ್ನ ಒಳಗೊಂಡ ಮಾಹಿತಿಯ ವರದಿ ಸಲ್ಲಿಕೆ ಮಾಡಲಾಗಿದೆ.