ನಗರದಲ್ಲಿ ಬಿಸಿಲು-ಮಳೆಯಿಂದಾಗಿ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಳ

ಗುರುವಾರ, 13 ಜುಲೈ 2023 (16:52 IST)
ನಗರದಲ್ಲಿ ಬಿಸಿಲು-ಮಳೆಯಿಂದಾಗಿ ಡೆಂಗಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ.ಈ ತಿಂಗಳು 11 ದಿನಗಳಲ್ಲಿ 178 ಮಂದಿಗೆ ಡೆಂಗಿ ಜ್ವರ ದೃಢವಾಗಿದೆ.ಈ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ 3,565 ಮಂದಿ ಡೆಂಗಿ ಶಂಕಿತರನ್ನು ಗುರುತಿಸಲಾಗಿದೆ.ಅವರಲ್ಲಿ 1,009 ಮಂದಿಯ ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ.
 
ಬೆಂಗಳೂರಿನಲ್ಲಿ 14 ಮಂದಿಯಲ್ಲಿ ಈವರೆಗೆ ಜ್ವರ ದೃಢಪಟ್ಟಿದೆ.ನಗರದಲ್ಲಿ ಈವರೆಗೆ ವರದಿಯಾದ ಡೆಂಗಿ ಪ್ರಕರಣಗಳ ಒಟ್ಟು ಸಂಖ್ಯೆ 919ಕ್ಕೆ ಏರಿಕೆಯಾಗಿದೆ.ನಿನ್ನೆ ಡೆಂಗೀ ಜ್ವರದಿಂದ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಸಾವಾನಾಪ್ಪಿದ್ದಾನೆ.ಬಿಸಿಲು ಮಳೆಯಿಂದಾಗಿ ಡೆಂಗಿ ಪ್ರಕರಣಗಳು ಹೆಚ್ಚಾಗಿದೆ.ಕೆಲವೆಡೆ ಮಳೆ ನೀರು ಹಾಗೇ ನಿಂತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಳವಾಗಿದೆ.ಈಡಿಸ್ ಎಂಬ ಸೊಳ್ಳೆ ಕಡಿತವೇ ಈ ಜ್ವರಕ್ಕೆ ಕಾರಣವಾಗಿದೆ.ಮಳೆ ನೀರು ಸಂಗ್ರಹವಾಗುವ ವಾಹನಗಳ ಚಕ್ರಗಳು, ತೆಂಗಿನ ಚಿಪ್ಪುಗಳನ್ನು ವಿಲೇವಾರಿ ಮಾಡುವುದೇ ಇದಕ್ಕೆ ಪರಿಹಾರವಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ