ಈ ಬಾರಿ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ.ಎಲ್ಲ ವೈದ್ಯಕೀಯ ಸೇವೆಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ಒದಗಿಸುವ ಮಹತ್ವದ ಘೋಷಣೆ ಆಗಿದೆ. ಈ ಯೋಜನೆ ಅನ್ವಯ ರಾಷ್ಟ್ರೀಯ ವೈದ್ಯಕೀಯ ಸೇವೆಗಳ ಸಮಗ್ರ ವಿವರ ಒದಗಿಸುವ ಆನ್‌ಲೈನ್ ವೇದಿಕೆಯನ್ನು ಸರ್ಕಾರ ರೂಪಿಸಲಿದೆ. ವೈದ್ಯಕೀಯ ಸಿಬ್ಬಂದಿ, ಸೇವೆಗಳ ಮಾಹಿತಿ ಇಲ್ಲಿ ಸಿಗಲಿದೆ.