ಧರ್ಮಸ್ಥಳ: 6 ಅಡಿ ಅಗೆದರೂ ಸಿಗದ ಕಳೆಬರಹ, ಕಾರ್ಯಚರಣೆಯಲ್ಲಿ ಬಿಗ್‌ಟ್ವಿಸ್ಟ್
ಅಧಿಕಾರಿಗಳು ಹಾಗೂ ಸಿಬ್ಬಂದಿ ತಲುಪುವುದಕ್ಕೆ ಹರಸಾಹಸ ಪಡಬೇಕಾದ ಈ ಜಾಗಕ್ಕೆ ನೆಲ ಅಗೆಯುವ ಯಂತ್ರವನ್ನು ಒಯ್ಯುವುದು ಕಷ್ಟಸಾಧ್ಯ. ಹಾಗಾಗಿ ಹೆಚ್ಚುವರಿ ಕಾರ್ಮಿಕರನ್ನು ಬಳಸಿಕೊಂಡೇ ಅಗೆಯಲು ವಿಶೇಷ ತನಿಖಾ ತಂಡ (ಎಸ್ಐಟಿ) ನಿರ್ಧರಿಸಿದೆ.
ಸಾಕ್ಷಿ ದೂರುದಾರ ತೋರಿಸಿದ ಮೊದಲ ಜಾಗವು ನೇತ್ರಾವತಿ ನದಿಯ ಪಕ್ಕದಲ್ಲೇ ಇತ್ತು. ಆ ಜಾಗದಲ್ಲಿ ಮಂಗಳವಾರ ಸುಮಾರು 8 ಅಡಿಗಳಷ್ಟು ಆಳಕ್ಕೆ ಅಗೆದಾಗಲೂ ಮೃತದೇಹಗಳನ್ನು ಹುಗಿದ ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ.