ಎಸ್ಐಟಿಯಿಂದ ನಡೆಯುತ್ತಿದೆಯಾ ಧರ್ಮಸ್ಥಳ ಸೌಜನ್ಯ ಕೇಸ್ ಸೀಕ್ರೆಟ್ ತನಿಖೆ

Krishnaveni K

ಶುಕ್ರವಾರ, 5 ಸೆಪ್ಟಂಬರ್ 2025 (10:46 IST)
ಬೆಳ್ತಂಗಡಿ: ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟವರನ್ನು ಒಬ್ಬೊಬ್ಬರಂತೇ ಕರೆದು ಎಸ್ಐಟಿ ತಂಡ ತನಿಖೆ ನಡೆಸುತ್ತಿದ್ದು ಇದನ್ನು ನೋಡ್ತಿದ್ದರೆ ಸೀಕ್ರೆಟ್ ಆಗಿ ಸೌಜನ್ಯ ಕೇಸ್ ತನಿಖೆ ನಡೆಸಲಾಗುತ್ತಿದೆಯೇ ಎಂಬ ಅನುಮಾನ ಬರುತ್ತಿದೆ.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ನೂರಾರು ಹತ್ಯೆ, ರೇಪ್ ಪ್ರಕರಣದ ತನಿಖೆಗೆ ಎಸ್ ಐಟಿ ರಚನೆಯಾಗಿತ್ತು. ಆದರೆ ತನಿಖೆಯಲ್ಲಿ ಆರೋಪ ಮಾಡಿದವರೇ ಆರೋಪಿಗಳಾದರು. ಧರ್ಮಸ್ಥಳದ ವಿರುದ್ಧ ಪಿತೂರಿ ಮಾಡಲೆಂದೇ ಆರೋಪ ಮಾಡಿದ್ದೇನೆಂದು ಬುರುಡೆ ಚಿನ್ನಯ್ಯ ಒಪ್ಪಿಕೊಂಡಿದ್ದ. ಇದರ ಬೆನ್ನಲ್ಲೇ ಕೇಸ್ ಗೆ ಟ್ವಿಸ್ಟ್ ಸಿಕ್ಕಿತ್ತು.

ಈಗ ಧರ್ಮಸ್ಥಳದಲ್ಲಿ 12 ವರ್ಷಗಳ ಹಿಂದೆ ಕೊಲೆಯಾದ ಸೌಜನ್ಯ ಕೇಸ್ ಗೆ ಸಂಬಂಧಪಟ್ಟವರನ್ನೂ ಎಸ್ಐಟಿ ಕಚೇರಿಗೆ ಕರೆಸಿ ತನಿಖೆ ನಡೆಸಲಾಗುತ್ತಿದೆ. ಸೌಜನ್ಯ ಕುಟುಂಬಸ್ಥರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ಕುಟುಂಬಸ್ಥರು ಆರೋಪಿಸಿದ್ದ ಉದಯ್ ಜೈನ್ ರನ್ನೂ ಕರೆಸಿ  ವಿಚಾರಣೆ ನಡೆಸಲಾಗಿದೆ.


ಹೀಗಾಗಿ ಸೌಜನ್ಯ ಪ್ರಕರಣವನ್ನು ರಹಸ್ಯವಾಗಿ ಮರು ತನಿಖೆ ಮಾಡಲಾಗುತ್ತಿದೆಯೇ ಅನುಮಾನ ಎಲ್ಲರಲ್ಲಿ ಶುರುವಾಗಿದೆ. ಇನ್ನು ತಮ್ಮನ್ನು ವಿಚಾರಣೆಗೆ ಕರೆಸಿಕೊಂಡ ಬಗ್ಗೆ ಉದಯ್ ಜೈನ್ ಮಾತನಾಡಿದ್ದು ಸೌಜನ್ಯ ಪ್ರಕರಣದ ಬಗ್ಗೆ ಏನೂ ಕೇಳಿಲ್ಲ ಎಂದಿದ್ದಾರೆ. ಧರ್ಮಸ್ಥಳದ ಸುತ್ತಮುತ್ತ ಹೆಣಗಳನ್ನು ಹೂತು ಹಾಕಿರುವ ಬಗ್ಗೆ ಪ್ರಶ್ನೆ ಕೇಳಿದರು. ಆದರೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದೇನೆ ಎಂದಿದ್ದಾರೆ. ಆದರೆ ಎಸ್ಐಟಿ ತನಿಖೆಯ ವಿವರ ಹೊರಬರುವವರೆಗೂ ಎಲ್ಲವೂ ಸಸ್ಪೆನ್ಸ್ ಆಗಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ