ವಾಸಂತಿ ಸತ್ತಿಲ್ಲ.. ಸುಜಾತ ಭಟ್ ಶಾಕಿಂಗ್ ಹೇಳಿಕೆ
ಅನನ್ಯಾ ಭಟ್ ನನ್ನ ಮಗಳು ಎಂದು ಹೇಳಿದ್ದ ಕತೆಯೆಲ್ಲಾ ಸುಳ್ಳು. ಆಸ್ತಿಗಾಗಿ ಮಾಡಿದ ಕಟ್ಟುಕತೆ ಎಂದು ಸುಜಾತ ಭಟ್ ಒಪ್ಪಿಕೊಂಡಿದ್ದಾರೆ. ಅನನ್ಯಾ ಭಟ್ ಎಂದು ಫೋಟೋ ತೋರಿಸಿದ್ದು ವಾಸಂತಿ ಎನ್ನುವ ಮಹಿಳೆಯದ್ದು ಎಂದು ಆಕೆಯ ಕುಟುಂಬಸ್ಥರೇ ಹೇಳಿದ್ದರು. ಆಕೆ ಈಗ ಬದುಕಿಲ್ಲ ಎಂದು ಹೇಳಿದ್ದರು. ಸುಜಾತ ಭಟ್ ಕೂಡಾ ಫೋಟೋ ವಾಸಂತಿಯದ್ದು ಎಂದಿದ್ದಾಳೆ.
ಆದರೆ ಇದೀಗ ಸುಜಾತ ಭಟ್ ಶಾಕಿಂಗ್ ವಿಚಾರ ಹೇಳಿದ್ದಾರೆ. ನದಿಯಲ್ಲಿ ಸಿಕ್ಕ ಶವ ವಾಸಂತಿಯದ್ದು ಎಂದು ನಿಮಗೆ ಯಾರು ಹೇಳಿದ್ದು? ಕೊಳೆತ ಶವ ವಾಸಂತಿಯದ್ದು ಎಂದು ಹೇಗೆ ನಂಬಿದಿರಿ? ಎಂದು ಎಸ್ಐಟಿಗೇ ಸುಜಾತ ಮರು ಪ್ರಶ್ನೆ ಮಾಡಿದ್ದಾಳೆ. ಇದೀಗ ಕೇಸ್ ಗೆ ಹೊರ ತಿರುವು ನೀಡಿದೆ. ಇನ್ನೂ ಶಾಕಿಂಗ್ ಸಂಗತಿಯೆಂದರೆ ವಾಸಂತಿ ಇನ್ನೂ ಸತ್ತಿಲ್ಲ, ಬದುಕಿದ್ದಾಳೆ ಎಂದು ಸುಜಾತ ಭಟ್ ಹೇಳಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಈಗ ಎಸ್ಐಟಿ ಆ ನಿಟ್ಟಿನಲ್ಲಿ ತನಿಖೆ ನಡೆಸಲಿದೆ.