ಧರ್ಮಸ್ಥಳ ಕೇಸ್: ಚಿನ್ನಯ್ಯನ್ನನ್ನು ಬೆಳ್ತಂಗಡಿಯಿಂದ ಎಸ್ಐಟಿ ಶಿಫ್ಟ್ ಮಾಡಿದ್ದೆಲ್ಲಿಗೆ
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಕತೆ ಕಟ್ಟಿದ್ದ ಚಿನ್ನಯ್ಯ ಈಗ ಸತ್ಯ ಬಾಯ್ಬಿಟ್ಟಿದ್ದಾನೆ. ಆತ ಎಸ್ಐಟಿ ವಶದಲ್ಲಿದ್ದಾನೆ. ಬುರುಡೆ ಗ್ಯಾಂಗ್ ನಿರ್ದೇಶನದ ಮೇರೆಗೆ ಹಣದ ಆಸೆಗೆ ಈ ಕೃತ್ಯವೆಸಗಿದ್ದಾಗಿ ಒಪ್ಪಿಕೊಂಡಿದ್ದ.
ಇದೀಗ ಆತನ ಹಿನ್ನಲೆ ತನಿಖೆಗೆ ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಆತ ಮಂಡ್ಯ ಮೂಲದವನಾಗಿದ್ದು ತಮಿಳಿನಾಡಿನಲ್ಲಿ ನೆಲೆಸಿದ್ದ ಎನ್ನಲಾಗಿತ್ತು. ಹೀಗಾಗಿ ಈಗ ಈ ಎರಡೂ ಕಡೆ ಆತನನ್ನು ಕರೆದುಕೊಂಡು ಹೋಗಿ ತನಿಖೆ ನಡೆಸಲು ಎಸ್ಐಟಿ ಮುಂದಾಗಿದೆ.
ಇದೇ ಕಾರಣಕ್ಕೆ ಈಗ ಆತನನ್ನು ತಮಿಳುನಾಡು ಅಥವಾ ಮಂಡ್ಯಕ್ಕೆ ಕರೆದೊಯ್ಯಲಾಗಿದೆ ಎನ್ನಲಾಗಿದೆ. ಆದರೆ ನಿಖರವಾಗಿ ಆತನನ್ನು ಎಲ್ಲಿಗೆ ಶಿಫ್ಟ್ ಮಾಡಲಾಗಿದೆ ಎಂಬುದನ್ನು ಎಸ್ಐಟಿ ರಹಸ್ಯವಾಗಿಟ್ಟಿದೆ.