ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಸಿಕ್ತು ಚಿನ್ನಯ್ಯನ ಮಹತ್ವದ ಸಾಕ್ಷ್ಯ

Krishnaveni K

ಮಂಗಳವಾರ, 26 ಆಗಸ್ಟ್ 2025 (12:44 IST)

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದ ಚಿನ್ನಯ್ಯನ ಕುರಿತು ಸಾಕ್ಷ್ಯ ಕಲೆ ಹಾಕುತ್ತಿರುವ ಪೊಲೀಸರು ಈಗ ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಮಹತ್ವದ ದಾಖಲೆ ಸಿಕ್ಕಿದೆ.

ಸರ್ಚ್ ವಾರೆಂಟ್ ಪಡೆದು ಇಂದು ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಮನೆಯ ಸಿಸಿಟಿವಿ, ಚಿನ್ನಯ್ಯನ ಫೋನ್ ಕೂಡಾ ಸಿಕ್ಕಿದೆ ಎನ್ನಲಾಗಿದೆ. ಚಿನ್ನಯ್ಯ ಈಗಾಗಲೇ ತಪ್ಪೊಪ್ಪಿಕೊಂಡಿದ್ದು ಧರ್ಮಸ್ಥಳ ವಿರೋಧಿ ಗುಂಪಿನ ಒತ್ತಾಯಕ್ಕೆ ಮಣಿದು ಈ ಕೆಲಸ ಮಾಡಿದೆ ಎಂದಿದ್ದ.

ನನ್ನ ಮೊಬೈಲ್, ಬ್ಯಾಗ್ ತಿಮರೋಡಿ ಮನೆಯಲ್ಲಿದೆ. ನನ್ನ ಮೊಬೈಲ್ ಫೋನ್ ನ್ನು ತಿಮರೋಡಿ ಕಡೆಯವರು ತೆಗೆದುಕೊಂಡಿದ್ದಾರೆ ಎಂದು ಚಿನ್ನಯ್ಯ ಎಸ್ಐಟಿ ಅಧಿಕಾರಿಗಳ ಮುಂದೆ ಹೇಳಿದ್ದ. ಅದರಂತೆ ತಪಾಸಣೆ ನಡೆಸಿದ ಪೊಲೀಸರು ಆತನಿಗೆ ಸೇರಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಧರ್ಮಸ್ಥಳದಲ್ಲಿ ಎಸ್ಐಟಿ ಅಧಿಕಾರಿಗಳು ಶವಗಳಿಗಾಗಿ ಶೋಧ ನಡೆಸುತ್ತಿದ್ದಾಗ ಈ ಗ್ಯಾಂಗ್ ನ ಎಲ್ಲಾ ಸದಸ್ಯರಿಗೂ ತಿಮರೋಡಿ ಮನೆಯಲ್ಲಿಯೇ ಆಶ್ರಯ ನೀಡಲಾಗಿತ್ತು ಎನ್ನಲಾಗಿದೆ. ಇದೀಗ ತಿಮರೋಡಿ ಮನೆಗೆ ಯಾರೆಲ್ಲಾ ಬರುತ್ತಿದ್ದರು ಎಂದು ತಿಳಿಯಲು ಸಿಸಿಟಿವಿ ವಶಪಡಿಸಿಕೊಳ್ಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ