ಧರ್ಮಸ್ಥಳ ಮಾಸ್ಕ್ ಮ್ಯಾನ್ ಮುಖ ರಿವೀಲ್: ಆತ ಹೊರಹಾಕಿದ ಸತ್ಯಗಳು ಇನ್ನಷ್ಟು ಶಾಕಿಂಗ್

Krishnaveni K

ಶನಿವಾರ, 23 ಆಗಸ್ಟ್ 2025 (13:06 IST)
Photo Credit: X
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ನೀಡಿ ಸಂಚಲನ ಸೃಷ್ಟಿಸಿದ್ದ ಮಾಸ್ಕ್ ಮ್ಯಾನ್ ನಿಜ ಮುಖ ಕೊನೆಗೂ ಬಯಲಾಗಿದೆ. ಈತ ಹೇಳಿರುವ ಸತ್ಯಗಳು ಇನ್ನಷ್ಟು ಶಾಕಿಂಗ್ ಆಗಿವೆ.

ಮಾಸ್ಕ್ ಮ್ಯಾನ್ ಹೆಸರು ಚಿನ್ನಯ್ಯ. ಈತನನ್ನು ಈಗ ಎಸ್ಐಟಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸುತ್ತಿದ್ದಾರೆ. ಈತ ಬಾಯ್ಬಿಡುತ್ತಿರುವ ಒಂದೊಂದೇ ವಿಚಾರಗಳು ಈಗ ನಿಜಕ್ಕೂ ಶಾಕಿಂಗ್ ಆಗಿದೆ. ಈ ಪ್ರಕರಣದ ಹಿಂದಿನ ಷಡ್ಯಂತ್ರಗಳನ್ನು ಬಯಲು ಮಾಡುತ್ತಿದೆ.

ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಚಿನ್ನಯ್ಯ ಬಳಿಕ ತಮಿಳುನಾಡಿನಲ್ಲಿ ಸೆಟ್ಲ್ ಆಗಿದ್ದ. ಇಲ್ಲಿ ಒಂದು ಗುಂಪು ಈತನನ್ನು ಸಂಪರ್ಕಿಸಿ ಅಕ್ರಮವಾಗಿ ಶವ ಹೂತಿದ್ದೇನೆಂದು ದೂರು ನೀಡುವಂತೆ ಒತ್ತಾಯಿಸಿತ್ತು. ಅದರಂತೆ ಹಣದ ಅಮಿಷವೊಡ್ಡಿ ತನ್ನನ್ನು ಕರೆತಂದಿದ್ದಾಗಿ ಆತ ಈಗ ಒಪ್ಪಿಕೊಂಡಿದ್ದಾನೆ.

ಧರ್ಮಸ್ಥಳ ದೇವಸ್ಥಾನ ವಿರೋಧಿ ಗ್ಯಾಂಗ್ ನನ್ನನ್ನು ಸಂಪರ್ಕಿಸಿತ್ತು. ಮಾತುಕತೆ ನಡೆಸುವ ವೇಳೆ ಹಣದ ಆಮಿಷವೊಡ್ಡಿದರು. ಈ ಪ್ರಕರಣದ ಮುಖ್ಯ ನಾಯಕ ನೀನು. ನಿನ್ನಿಂದ ಪ್ರಕರಣಕ್ಕೆ ಟ್ವಿಸ್ಟ್ ಸಿಗಲಿದೆ ಎಂದು ಆ ಗ್ಯಾಂಗ್ ನಂಬಿಸಿತ್ತು. ತನಿಖೆಯಾಗುವ ಸಂದರ್ಭದಲ್ಲಿ ಬೇರೆ ದೂರುದಾರರೂ ಮುಂದೆ ಬರುತ್ತಾರೆ. ಹೀಗಾಗಿ ನೀನು ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾಗಿ ಆತ ಸತ್ಯ ಬಾಯ್ಬಿಟ್ಟಿದ್ದಾನೆ.

ಅಷ್ಟೇ ಅಲ್ಲದೆ, ಈತನಿಗೆ ಪೊಲೀಸರ ಜೊತೆ ಹೇಗೆ ಮಾತನಾಡಬೇಕು ಎಂದು ಟ್ರೈನಿಂಗ್ ಕೂಡಾ ನೀಡಲಾಗಿತ್ತಂತೆ. ಅವರು ಹೇಳಿದಂತೆ ನಾನು ಮಾಹಿತಿ ನೀಡುತ್ತಿದ್ದೆ ಎಂದು ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ