ಗಾಂಧಿ ಜೀವನ ಸಾರುವ ಅಂಚೆ ಚೀಟಿ, ನಾಣ್ಯಗಳನ್ನು ನೋಡಿದ್ರಾ?

ಬುಧವಾರ, 2 ಅಕ್ಟೋಬರ್ 2019 (18:10 IST)
ಮಹಾತ್ಮಾ ಗಾಂಧೀಜಿ ಕಲಿತ ರಾಜ್ ಕೋಟ್‌ ನ ಅಲ್ರ್ಫೇಡ್ ಶಾಲೆ, ಸಾವರಮತಿ ಆಶ್ರಮ, ಚಲೇಜಾವ್ ಚಳವಳಿ ಸೇರಿದಂತೆ ಗಾಂಧೀಜಿಯವರ ಜೀವನಗಾಥೆಯ ಸನ್ನಿವೇಶಗಳ ಪ್ರದರ್ಶನ ಜನಗರ ಗಮನ ಸೆಳೆಯುತ್ತಿವೆ.

ಹುಬ್ಬಳ್ಳಿಯ ದಾಜೀಬಾನ್ ಪೇಟದ ದುರ್ಗಾದೇವಿ ಹೈಸ್ಕೂಲ್ ಸಭಾಭವನದಲ್ಲಿ ಇವೆಲ್ಲವೂ ಪ್ರದರ್ಶನಗೊಂಡಿತು.

ಹುಬ್ಬಳ್ಳಿ ಚಾಲುಕ್ಯ ನಾಣ್ಯ ಸಂಗ್ರಹಕಾರ ಸಂಘದಿಂದ ನಡೆಯುತ್ತಿರುವ ಪ್ರದರ್ಶನ ಇದಾಗಿದ್ದು, ಶಾಂತಿ ಮತ್ತು ಅಹಿಂಸೆ ಅಸ್ತ್ರದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಜೀವನದ ಅಪರೂಪದ ಅಂಚೆ ಕಾರ್ಡ್, ಚೀಟಿ ಮತ್ತು ನಾಣ್ಯಗಳ ಪ್ರದರ್ಶನದಲ್ಲಿ, 1947 ರ ನಂತರ ಫಸ್ಟ್ ಡೇ ಪೋಸ್ಟಲ್ ಕವರ್, ಖಾಸಗಿ ಸಂಸ್ಥೆಗಳು ಹೊರ ತಂದಿರುವ ಸ್ಪೆಷಲ್ ಕವರ್ ಗಳು, ಗಾಂಧೀಜಿ ಕುರಿತು ಹೊರ ಬಂದಿರುವ ಅಂಚೆ ಚೀಟಿ, ಅಪರೂಪದ ಚಿತ್ರಗಳಿರುವ ನಾಣ್ಯಗಳು ಪ್ರದರ್ಶನದಲ್ಲಿದ್ದವು. 


ಪ್ರದರ್ಶನದಲ್ಲಿ ಮಹತ್ಮಾ ಗಾಂಧೀಜಿಯವರ ಜೀವನ ಮತ್ತು ಸಾಧನೆ ಬಿಂಬಿಸುವ ಅಪರೂಪದ ಅಂಚೆ ಕಾರ್ಡ್, ನಾಣ್ಯಗಳು ಸಾರ್ವಜನಿಕರಿಗೆ ಲಭಿಸಲಿದೆ. ಆಸಕ್ತರು ಗಾಂಧೀಜಿ ಅವರ ಅಪರೂಪದ ಅಂಚೆ ಚೀಟಿ ಮತ್ತು ನಾಣ್ಯಗಳನ್ನು ವೀಕ್ಷಿಸುವ ಜತೆಗೆ ಅವುಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿತು. ಇದರಿಂದ ಹಲವಾರು ಜನರು ತಮಗೆ ಇಷ್ಟವಾದ ಅಂಚೆ ಕಾರ್ಡ್ ಗಳು, ನಾಣ್ಯಗಳನ್ನು ತೆಗೆದುಕೊಂಡರು. 

        ಪ್ರದರ್ಶನದಲ್ಲಿ ಫಸ್ಟ ಡೇ ಕಾರ್ಡ್ ಗಳು, ಗಾಂಧೀಜಿಯವರ ಜಯಂತ್ಯೋತ್ಸವದಂದು ಹೊರತಂದಿರುವ ಹಳೆಯ ಮತ್ತು ಇವತ್ತಿನ 150 ನೇ ಜಯಂತ್ಯೋತ್ಸವದ ಅಂಚೆ ಚೀಟಿ ಮತ್ತು ಕಾರ್ಡ್ ಗಳು ವಿಶೇಷವಾಗಿ ಪ್ರದರ್ಶನಗೊಂಡವು.

ಮಹತ್ಮಾ ಗಾಂಧೀಜಿಯವರ ಭಾವಚಿತ್ರ ಇವರು 107 ದೇಶದ ಅಂಚೆ ಚೀಟಿ, ಭಾರತದ 20 ಅಂಚೆ ಚೀಟಿಗಳು ಹಾಗೂ 10 ರೂ ಬೆಳ್ಳಿ ನಾಣ್ಯಗಳು ಇರಲಿವೆ. ಜತೆಗೆ ಶಾತವಾಹನರ, ಚಂದ್ರಗುಪ್ತರು, ಮೌರ್ಯರು, ವಿಜಯ ನಗರ ಸಾಮ್ರಾಜ್ಯ, ಮೈಸೂರ ಮಹಾರಾಜರ ಆಳ್ವಿಕೆ ಹಾಗೂ ಸ್ವತಂತ್ರ ಭಾರತದ ನಂತರದಿಂದ ಈವರೆಗೆ ಅಪರೂಪದ ಹಾಗೂ ಚಿನ್ನದ ನಾಣ್ಯಗಳು ಪ್ರದರ್ಶನ ನಾಣ್ಯಗಳು ಪ್ರದರ್ಶನದ ಜೊತೆಗೆ ವಿವಿಧ 90 ಪ್ರಮುಖ ದೇಶಗಳು ಹಳೆಯ ಮತ್ತು ಈಗಿನ ಚಾಲ್ತಿಯಲ್ಲಿರುವ ನಾಣ್ಯಗಳು ಪ್ರದರ್ಶನದಲ್ಲಿದ್ದವು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ