ಗಾಂಧೀಜಿಗೆ ಶಸ್ತ್ರಚಿಕಿತ್ಸೆ ಮಾಡಿದ ಆ ಕೊಠಡಿಗೆ ಈಗಲೂ ಯಾರಿಗೂ ಎಂಟ್ರಿಯಿಲ್ಲ!
ಬುಧವಾರ, 2 ಅಕ್ಟೋಬರ್ 2019 (07:45 IST)
ಮುಂಬೈ: ಇಂದು ಅಕ್ಟೋಬರ್ 2. ದೇಶದಾದ್ಯಂತ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ಜನ್ಮದಿನವನ್ನು ನಾನಾ ರೀತಿಯಲ್ಲಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗಾಂಧೀಜಿಗೆ ಕುರಿತಾದ ಹಳೆಯ ನೆನಪೊಂದನ್ನು ಮೆಲುಕು ಹಾಕೋಣ.
ಅದು 1924 ರ ಸಮಯ. ಆಗ ಗಾಂಧೀಜಿ ಅಪೆಂಡಿಟೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು. ಹೀಗಾಗಿ ಪುಣೆಯ ಆಸ್ಪತ್ರೆಗೆ ದಾಖಲಾಗಿದ್ದರು. ಆವತ್ತು ವಿಪರೀತ ಗುಡುಗು-ಸಿಡಿಲ ಜತೆಗೆ ಧಾರಾಕಾರ ಮಳೆಯಾಗುತ್ತಿತ್ತು. ಹೀಗಾಗಿ ವಿದ್ಯುತ್ ಸಂಪರ್ಕವೂ ಕಡಿದುಹೋಗಿತ್ತು.
ಹಾಗಿದ್ದರೂ ಅಂದು ರಾತ್ರಿ ಗಾಂಧೀಜಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆ ಆಸ್ಪತ್ರೆಯ ಕೊಠಡಿಯನ್ನು ಅದಾದ ಬಳಿಕ ಸಾರ್ವಜನಿಕರಿಗೆ ಬಳಸಲು ಅವಕಾಶ ಮಾಡಿಕೊಡಲಿಲ್ಲ. ಅದಾದ ಬಳಿಕ ಇಂದಿಗೂ ಅಂದರೆ ಬರೋಬ್ಬರಿ 95 ವರ್ಷಗಳ ಬಳಿಕವೂ ಆ ಶಸ್ತ್ರಚಿಕಿತ್ಸೆ ಕೊಠಡಿ ಲಾಕ್ ಆಗಿಯೇ ಇದೆ. ಅಲ್ಲಿ ಈಗಲೂ ಅಂದು ಗಾಂಧೀಜಿ ಶಸ್ತ್ರಚಿಕಿತ್ಸೆಗೆ ಬಳಸಿದ್ದ ಪರಿಕರಗಳು, ಟೇಬಲ್ ಎಲ್ಲವೂ ಇವೆಯಂತೆ. ಅದು ಇಂದಿಗೆ ಒಂದು ಸ್ಮಾರಕದಂತೆ ಉಳಿಸಿಕೊಳ್ಳಲಾಗಿದೆ. ಈಗಲೂ ಪ್ರತೀವರ್ಷವೂ ಗಾಂಧೀ ಜಯಂತಿಗೆ ಅಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತದಂತೆ. ಬಾಪೂಜಿ ನೆನಪನ್ನು ಆ ಆಸ್ಪತ್ರೆ ಮತ್ತು ಅಲ್ಲಿನ ಸಿಬ್ಬಂದಿ ಎಂದಿಗೂ ಮರೆಯುವುದಿಲ್ಲ.