ರಣಬೇಟೆಗಾರ ಡಿಕೆಶಿಯವರನ್ನ ಪಕ್ಕಾ ಟಾರ್ಗೆಟ್ ಮಾಡಲಾಗ್ತಿದ್ಯಾ….?

geetha

ಬುಧವಾರ, 6 ಮಾರ್ಚ್ 2024 (14:45 IST)
ಬೆಂಗಳೂರು- ಡಿಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್‌ನ ಪಾಲಿಗೆ ಪ್ರಚಂಡ ಶಕ್ತಿ, ಕಷ್ಟದ ಸಮಯದಲ್ಲಿ ಐಸಿಯೂನಲ್ಲಿದ್ದ ಕಾಂಗ್ರೆಸ್‌ಗೇ ಆಕ್ಸಿಜನ್ ಕೊಟ್ಟ ಟ್ರಬಲ್‌ಶೂಟರ್‌ನ ಪಣವನ್ನ ಯಾರು ಕೂಡ ಅಲ್ಲಗಳೆಯಬಾರದು ಇವತ್ತು ಕಾಂಗ್ರೆಸ್ ಪ್ರಚಂಡ ದಿಗ್ವಿಜಯವನ್ನು ಸಾಧಿಸಿ, ೧೩೫ ಸೀಟ್‌ಗಳನ್ನು ಗಳಿಸುವ ಮೂಲಕ ಬಿಜೆಪಿ ಮತ್ತು ದಳಪತಿಗಳ ಕೋಟೆಯಲ್ಲಿ ನಡುಕವನ್ನು ಹುಟ್ಟಿಸಿದ್ದಾಗಿದೆ ಹಾಗೇ ನೋಡಿದರೇ, ಕಾಂಗ್ರೆಸ್ ಅಧಿಕಾರದ ಸೂತ್ರವನ್ನು ಹಿಡಿದು, ಗ್ಯಾರಂಟಿ ದರ್ಬಾರ್ ನಡೆಸೋದಕ್ಕೆ ಮೂಲ ಕಾರಣ ಡಿಕೆಶಿ ಗಟ್ಟಿ ನಾಯಕತ್ವ, ಇದರ ಜೊತೆಗೆ ಸಿದ್ದರಾಮಯ್ಯನವರ ಅಹಿಂದ ವರ್ಗದ ಬಲ
 
ಜೆಡಿಎಸ್ ಮತ್ತು ಬಿಜೆಪಿ ಇದೀಗ ಲೋಕಸಭಾ ದೃಷ್ಟಿಯಿಂದ ಮೈತ್ರಿ ಮಾಡಿಕೊಂಡು, ಕಾಂಗ್ರೆಸ್‌ನ್ನು ಹಣಿಯುವ ಕೆಲಸ ಆಗ್ತಾ ಇದೆ… ಅದರಲ್ಲೂ ಮುಖ್ಯವಾಗಿ ಡಿಕೆಶಿಯನ್ನ ಟಾರ್ಗೆಟ್ ಮಾಡಬೇಕೆನ್ನುವ ದೊಡ್ಡ ಹುನ್ನಾರವೇ ನಡೆಯುತ್ತಿದೆ…. ಒಂದು ಕಡೆ ದಳಪತಿಗಳ ಕೋಟೆಯನ್ನ ಛಿದ್ರ ಮಾಡಿ, ಹಳೆಯ ಮೈಸೂರು ಭಾಗದಲ್ಲಿ ಪ್ರಬಲ ಒಕ್ಕಲಿಗ ನಾಯಕನಾಗಿ ಗುರ್ತಿಸಿಕೊಂಡ ಡಿಕೆಶಿಯನ್ನ ಉದ್ದೇಶಪೂರ್ವಕವಾಗಿಯೇ ಟಾರ್ಗೆಟ್ ಮಾಡಲಾಗ್ತಿದ್ಯಾ ಅನ್ನುವ ರಾಜಕೀಯ ಬಿರುಗಾಳಿ ಎದ್ದಿದೆ…
 
ನಿಜ.. ಅಸೆಂಬ್ಲಿ ಚುನಾವಣೆಯಲ್ಲಿ ಡಿಕೆಶಿ ನಾಯಕತ್ವದಲ್ಲಿ ಕಾಂಗ್ರೆಸ್ ದಳಪತಿಗಳು ಮತ್ತು ಬಿಜೆಪಿಯ ಚುನಾವಣಾ ತಂತ್ರಗಳನ್ನು ಬುಡಮೇಲು ಮಾಡಿದ್ದು ಇದೇ ಡಿಕೆಶಿ, ಅದರಲ್ಲೂ ಹಳೇಯ ಮೈಸೂರು ಭಾಗದಲ್ಲಿ ಜೆಡಿಎಸ್ ತನ್ನ ಹಿಡಿತವನ್ನು ಕಳೆದುಕೊಂಡಾಗಿದೆ… ಅಲ್ಲೇಲ್ಲ ಡಿಕೆಶಿ ಮಾಡಿದ ಮೋಡಿ, ಕಾಂಗ್ರೆಸ್‌ಗೆ ಪ್ಲಸ್ ಆಗಿದೆ… ಜೆಡಿಎಸ್‌ನ ಭದ್ರಕೋಟೆಯಲ್ಲಿ ಟ್ರಬಲ್ ಶೂಟರ್ ಹೆಣೆದ ಸಮುದಾಯದ ಬಾಣ ಅಕ್ಷರಶಃ ಕೈ ಹಿಡಿದಿದೆ…
 
ಕೈ ಪಾಳಯದಲ್ಲೇ ಸಿದ್ಧವಾಗ್ತಿದ್ಯಾ ಡಿಚ್ಚಿ ಕೊಡುವ ಪ್ಲಾನ್…..?
 
ದಳಪತಿಗಳಿಗೆ ನಡುಕ ಹುಟ್ಟಿಸಿದ ಡಿಕೆಶಿಗೆ ಖೆಡ್ಡಾ ಸಿದ್ಧವಾಯ್ತಾ….?
 
ಯೆಸ್, ಟ್ರಬಲ್ ಶೂಟರ್, ರಣಬೇಟೆಗಾರ ಕನಕಪುರದ ಬಂಡೆ ಡಿಕೆ ಶಿವಕುಮಾರ್ ಅವರನ್ನ ಹೇಗಾದರೂ ಮಾಡಿ ಕುಗ್ಗಿಸಬೇಕೆಂಬ ಅಜೆಂಡಾ ಸಿದ್ಧವಾಗ್ತಿದೆ… ಅದರಲ್ಲೂ ಕಾಂಗ್ರೆಸ್‌ನ ಪಾಳಯದಲ್ಲೇ ಇಂತಹದೊAದು ಷಡ್ಯಂತ್ರ ನಡೆಯುತ್ತಿದೆಯಾ ಅನ್ನುವ ಗುಲ್ಲು ಎದ್ದಿದೆ.. ಒಂದು ಕಡೆ ಕಾಂಗ್ರೆಸ್ನಲ್ಲಿ ಮಿನಿಸ್ಟರ್ ಆಗಿರುವ ಕೆ. ಎನ್ ರಾಜಣ್ಣ ಕೊಟ್ಟ ಡಿಸಿಎಂ ಡಿಚ್ಚಿ, ಕಾಂಗ್ರೆಸ್‌ನಲ್ಲಿ ಮಾತ್ರವಲ್ಲ, ಎದುರಾಳಿ ಪಕ್ಷಗಳ ಪಾಳಯದಲ್ಲೂ ಸಂಚಲನವನ್ನ ಸೃಷ್ಟಿಸಿತ್ತು… ಅಲ್ಲಿಗೆ ಡಿಕೆಶಿ ಡಿಸಿಎಂ ಆಗಿರೋದೆ ಇವರಿಗೆ ತಲೆನೋವಾಯ್ತಾ..? ಮನೆಯಲ್ಲಿ ಇದ್ದವರಿಂದಲೇ, ಡಿಕೆಶಿಯನ್ನ ಹಣಿಯುವ ತಂತ್ರಗಾರಿಕೆ ಆಗ್ತಾ ಇದ್ಯಾ..?
 
ಡಿಕೆಶಿ ಪ್ರಬಲ ಒಕ್ಕಲಿಗ ನಾಯಕನಾಗಿ ಬಿಂಬಿತವಾಗ್ತಾ ಇರೋದೇ, ಇತ್ತ ದಳಪತಿಗಳ ಕೋಟೆಯಲ್ಲಿ ನಡುಕ, ಮತ್ತು ಹೊಸ ಆತಂಕ ಶುರುವಾಯ್ತಾ..? ಕುಮಾರಣ್ಣ, ಮತ್ತು ದೊಡ್ಡಗೌಡರಿಗೆ ಡಿಕೆಶಿಯೂ ಪ್ರಬಲ ಒಕ್ಕಲಿಗ ನಾಯಕನಾಗಿ ಹೊರಹೊಮ್ಮಿತ್ತಿರೋದು ಸಹಿಸಲಾಗ್ತಿಲ್ವಾ…? ಅದಕ್ಕೇನಾ ಇಳಿಯ ವಯಸ್ಸಿನಲ್ಲೂ, ದೇವೇಗೌಡರು ಡಿಕೆಶಿಯ ವಿರುದ್ಧ ಆ ಪಾಟಿ ಗುಡುಗಿದ್ದು…? ಹಾಗಾದರೆ ಬಿಜೆಪಿಯ ಜೊತೆ ಸಖ್ಯ ಬೆಳೆಸಿರೋದು ಕನಕಪುರದ ಬಂಡೆಯನ್ನ ರಾಜಕೀಯವಾಗಿ ಮುಗಿಸೋದಕ್ಕಾ..?
 
ಹೌದು…  ಕಾಂಗ್ರೆಸ್ ಇದೀಗ ರಾಜ್ಯದಲ್ಲಿ ಬಲಿಷ್ಠವಾಗ್ತಾ ಇದೆ.. ಜೆಡಿಎಸ್‌ನ ಪ್ರಾಬಲ್ಯ ಅಷ್ಟಕಷ್ಟೆ, ಅದರಲ್ಲೂ ತನ್ನದೇ ಆದ ವೋಟ್‌ಬ್ಯಾಂಕ್‌ನ್ನು ಸೃಷ್ಟಿಸಿಕೊಂಡಿದ್ದ ಜೆಡಿಎಸ್‌ಗೆ, ಅಸೆಂಬ್ಲಿ ಚುನಾವಣೆಯಲ್ಲಿ ದೊಡ್ಡ ಪೆಟ್ಟು ಬಿದ್ದಾಗಿದೆ… ಮಂಡ್ಯ, ಮೈಸೂರು, ತುಮಕೂರು, ಕೋಲಾರ, ಭಾಗದಲ್ಲಿ ನಿತ್ರಾಣವಾಗಿ ಹೋಗಿದೆ ಜೆಡಿಎಸ್… ಇದ್ದ ಬದ್ದ ಕ್ಷೇತ್ರಗಳನ್ನು ಡಿಕೆಶಿಯ ಪ್ರಾಬಲ್ಯದ ಪರಿಣಾಮ, ಕಾಂಗ್ರೆಸ್‌ಗೆ ಬಿಟ್ಟು ಕೊಟ್ಟಾಗಿದೆ…
 
ಡಿಕೆಶಿಯೂ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರಂತೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಟ್ಟಿಗೆ ಪವರ್ ಗಿಟ್ಟಿಸಿಕೊಂಡಿದ್ದಾರೆ… ಸಿಎಂ ಎಲ್ಲಿ ಇರ್ತಾರೋ, ಅಲ್ಲಿಯೇ ಡಿಸಿಎಂ ಡಿಕೆಶಿನೂ ಇರ್ತಾರೆ, ಅಲ್ಲಿಗೆ ಸರ್ಕಾರದಲ್ಲೂ ಡಿಕೆಶಿಯ ಹಸ್ತಕ್ಷೇಪ ಬಹುತೇಕ ನಡೆಯುತ್ತಿದೆ… ಬಹುಶಃ ಇದೇ ಕಾರಣವೇ ಇರಬೇಕು, ಬರೀ ಹೊರಗಿನ ಶಕ್ತಿಗಳು ಮಾತ್ರವಲ್ಲ, ಸರ್ಕಾರದ ಭಾಗವಾಗಬೇಕಾದವರೇ, ಡಿಕೆಶಿಯನ್ನ ಟಾರ್ಗೆಟ್ ಮಾಡಿದ್ದಂತೆ ಬಿಂಬಿತವಾಗ್ತಿದೆ…  ಹಿಂದೆ ಶಾಮನೂರು ಲಿಂಗಾಯತರಿಗೆ ಸ್ಥಾನಮಾನ ಹೆಚ್ಚಿರಲೀ ಅಂದಿದ್ರು. ಮತ್ತೊಂದು ಕಡೆ ಮೂರು ಡಿಸಿಎಂ ಸೃಷ್ಟಿಸಿ, ಅಂತ ಪುಂಕಾನುಪುAಕಾವಾಗಿ ಹೇಳಿಕೆಗಳು ಬರ್ತಾ ಇವೆ… ಇದಕ್ಕೆ ಕೆಲವರು ನೋ, ಅಂದರೇ ಕೆಲವರು ಯೆಸ್ ತಪ್ಪೇನಿದೆ ಅಂದಿದ್ದು ಇದೆ… ಹಾಗಾದರೆ ಏನಿದು ಮರ್ಮ…. ? ಇದು ಪಕ್ಕಾ ಡಿಕೆಶಿಗೆ ಖೆಡ್ಡಾ ತೋಡುವ ಹುನ್ನಾರವಲ್ಲವಾ…?
 
ದೇಶದಲ್ಲಿ ನಿತ್ರಾಣ ಸ್ಥಿತಿಯಲ್ಲಿರುವ ಕೈಗೆ ಡಿಕೆಶಿಯ ಪವರ್‌ಫುಲ್ ಗೇಮ್‌ಪ್ಲಾö್ಯನ್ ವರ್ಕೌಟ್ ಆಗಿದೆ.. ಪರಿಣಾಮ ಬರೋಬ್ಬರಿ ೧೩೫ ಸೀಟ್‌ಗಳು ಗೆದ್ದು ಚರಿತ್ರೆ ಸೃಷ್ಟಿಯಾಗಿದೆ.. ಜೆಡಿಎಸ್ ಗೆದ್ದಿದ್ದ ಕಡೆಯೆಲ್ಲಾ, ಡಿಕೆಶಿಯ ಒಕ್ಕಲಿಗ ಸಮುದಾಯದ ಗಟ್ಟಿ ನಾಯಕತ್ವ ಫಲಪ್ರದವಾಗಿದೆ… ದಳಪತಿಗಳಿಗೆ ಮಾತ್ರ ತಳಮಳ ಶುರುವಾದಂತಿದೆ.. ವಕ್ಕಲಿಗ ಮತಗಳು ಮುಂದಿನ ಲೋಕಸಭಾ ಚುನಾವಣೆಯಲ್ಲೂ ಜೆಡಿಎಸ್ ಕೈತಪ್ಪುವ ಆತಂಕ ದಳಪತಿಗಳಿಗೆ ಮನದಟ್ಟಾಂತಿದೆ.
 
ಯೆಸ್…. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ನ ಪ್ರಾಬಲ್ಯ ಹೆಚ್ಚಿದೆ. ಇತ್ತ ಕೈ ಹೈಕಮಾಂಡ್ ವಕ್ಕಲಿಗ ಸಮುದಾಯದ ಪ್ರಬಲ ನಾಯಕ ಡಿಕೆಶಿಗೆ ರಾಜ್ಯ ಕಾಂಗ್ರೆಸ್‌ನ ಹಿಡಿತ ಸಿಕ್ಕಿದೆ… ಇದ್ರ ಜೊತೆಗೆ ಡಿಸಿಎಂ ಆಗಿರೋದು ಕೂಡ ದಳಪತಿಗಳ ಹಿನ್ನೆಡೆಗೆ ಕಾರಣವಾಗಬಹುದು. ಇದ್ರ ಜೊತೆಗೆ ಈಗ ಮತ್ತೆ ಜೆಡಿಎಸ್ ಭದ್ರಕೋಟೆಯಾದ ಹಳೆ ಮೈಸೂರು ಭಾಗದಲ್ಲಿ ಟ್ರಬಲ್ ಶೂಟರ್ ಡಿಕೆಶಿ ಅಲ್ಲಿನ ಸ್ಥಳಿಯ ಜೆಡಿಎಸ್ ನಾಯಕರನ್ನ ಸೆಳೆದು ಪಕ್ಷ ಬಲವರ್ದನೆ ಮಾಡಿದ್ದಾರೆ.. ಈಗಾದರೆ ಏನು ಮಾಡೋದು ಪಾಪ ದಳಪತಿಗಳು.. ? ಅದಕ್ಕಾಗಿ ಅಲ್ಲವೇ ಈಗ ಮೋದಿ ಮತ್ತು ಶಾರನ್ನ ಮನವೊಲಿಸಿ ಮೈತ್ರಿ ಖಾತ್ರಿ ಮಾಡಿಕೊಂಡು ಬಂದಿರೋದು..? ಅಲ್ಲಿಗೆ ಕೇಂದ್ರದ ಬಿಜೆಪಿಯ ಬೆಂಬಲ ಪಡೆದು, ಅನ್ಯ ಮಾರ್ಗದ ಮೂಲಕ ಡಿಕೆಶಿಯ ಪ್ರಬಲ ನಾಗಲೋಟವನ್ನು ನಿಲ್ಲಿಸುವ ಅಜೆಂಡಾ ಇರದೇ ಇರುತ್ತಾ>>? ರಾಜಕೀಯವಾಗಿ ಅಲ್ಲದೇ ಕಾನೂನಾತ್ಮಕವಾಗಿ ಡಿಕೆಶಿಗೆ ಟಕ್ಕರ್ ನೀಡುವ ಯೋಜನೆ ದಳಪತಿಗಳ ಮನದಲ್ಲಿ ಮೂಡದೇ ಇರುತ್ತಾ..? ಬಟ್ ನಾಟ್‌ಶ್ಯೂರ್……!??
 
 
ಬಿಜೆಪಿ ಜೊತೆ ಜೆಡಿಎಸ್ ಸಖ್ಯ….. ಡಿಕೆಶಿನೇ ಮೈನ್ ಟಾರ್ಗೆಟ್ ಆಗ್ತಾರಾ…?
ದೊಡ್ಡಗೌಡರಿಗೆ ಸಮುದಾಯದ ವೋಟ್ ಬ್ಯಾಂಕ್ ಕೈ ತಪ್ಪುವ ಆತಂಕನಾ..?
 
ಯೆಸ್…. ಇದೀಗ ನೇರವಾಗಿ ಅಲ್ಲದೇ ಹೋದರೂ, ಎರಡು ದಿಕ್ಕುಗಳಿಂದಲೂ, ಕಾಂಗ್ರೆಸ್ ಪಾಲಿಗೆ ಒಕ್ಕಲಿಗ ನಾಯಕತ್ವದ ಗಟ್ಟಿ ಬೇರಿನಂತೆ ಗುರ್ತಿಸಿಕೊಳ್ಳುತ್ತಿರುವ, ಹಾಗೇ ದೊಡ್ಡ ಗೌಡರ ಕುಟುಂಬದ ರಾಜಕಾರಣಕ್ಕೆ ಸೆಡ್ಡು ಹೊಡೆದು, ತಾನೊಬ್ಬ ಪವರ್‌ಫುಲ್ ಸಮುದಾಯದ ನಾಯಕನಾಗಿ ಬೆಳೆದು ನಿಲ್ಲುತ್ತಿರುವ ಒನ್ ಅಂಡ್ ಓನ್ಲಿ ಪಕ್ಕಾ ಡೈನಾಮಿಕ್ ಲೀಡರ್ ಅಂದ್ರೆ ಅದು ಡಿಕೆಶಿ….
 
ಬಟ್ ಇದೀಗ ಅದರಲ್ಲೂ ಜೆಡಿಎಸ್‌ನ ಸಾಂಪ್ರದಾಯಿಕ ಮತಬ್ಯಾಂಕ್ ಆಗಿದ್ದ, ಒಕ್ಕಲಿಗ ವೋಟ್‌ಬ್ಯಾಂಕ್ ಮತ್ತು ದಳಪತಿಗಳ ಹಿಡಿತವಿದ್ದ ಭಾಗಗಳು ಅಸೆಂಬ್ಲಿ ಚುನಾವಣೆಯಲ್ಲಿ ಛಿದ್ರ ಆಗಿ ಹೋಗಿವೆ…. ಅದಕ್ಕೆ ಕಾರಣ ಡಿಕೆಶಿ ಎಂಬ ಪ್ರಭಾವಿ, ಪ್ರಬಲ ಒಕ್ಕಲಿಗ ನಾಯಕ….
 
ಹೌದು… ಜೆಡಿಎಸ್‌ನ ಅಸ್ತಿತ್ವ ಅನ್ನೋದಕ್ಕಿಂತ, ದೇವೇಗೌಡರ ಕುಟುಂಬದ ಮುಷ್ಟಿಯಲ್ಲಿದ್ದ ಒಕ್ಕಲಿಗ ಸಮುದಾಯದ ವೋಟ್‌ಬ್ಯಾಂಕ್, ಅನಾಯಾಸವಾಗಿ ಡಿಕೆಶಿ ಅದೇ ಸಮುದಾಯದ ಮತ್ತೊಬ್ಬ ನಾಯಕ ಅನ್ನುವ ಕಾರಣಕ್ಕೆ, ಅದು ಕಾಂಗ್ರೆಸ್ ಕಡೆಗೆ ವಾಲಿದೆ.. ಹಾಗಾಗಿ ಇದು ಆರು ತಿಂಗಳುಗಳ ಕಾಲ ದೇಶವನ್ನಾಳಿದ ಮಾಜಿ ಪ್ರಧಾನಿ ದೇವೆಗೌಡರಿಗೆ ಅಷ್ಟು ಸುಲಭವಾಗಿ ಅರಗಿಸಿಕೊಳ್ಳುವ ಮ್ಯಾಟರ್ ಅಲ್ಲ.. ಅದಕ್ಕಾಗಿ, ಡಿಕೆಶಿ ಆಟ ನಡೆಯೆಲ್ಲಾ ಅಂತ ಬಹಿರಂಗವಾಗಿ ಸವಾಲೆಸೆದಿದ್ದರು ಈ ಹಿಂದೆ. ಬಹುಶಃ ಇದರ ಅಂತರ್ಯದ ಮಾತು, ಡಿಕೆಶಿಗೂ ಅರಿವು ಆಗಿತ್ತು…… ಅದಕ್ಕೆ ಡಿಕೆಶಿನೂ, ಯಾವುದಕ್ಕೂ ಜಗ್ಗಲ್ಲ, ಅನ್ನುವ ಹಾಗೇ ಟಾಂಗ್ ಕೊಟ್ಟಿದ್ದರು.. ದೇವೇಗೌಡರು ಆಡಿದ ಮಾತು ಆರ್ಶಿವಾದವಾಗಲೀ ಅಂದಿದ್ದರು ಚಾಣಾಕ್ಷ ಡಿಕೆ.
 
ಒಂದು ಕಡೆ ದಳಪತಿಗಳಿಗೆ ರಾಜಕೀಯವಾಗಿ ಭಾರೀ ಹಿನ್ನಡೆ ಆಗುತ್ತಿದೆ… ಅದರಲ್ಲೂ ಡಿಕೆಶಿಯ ರಾಜಕೀಯ ಪಗಡೆ ಆಟವನ್ನ ನೋಡಿದ ಮೇಲಂತೂ, ಮುಂದೇ ಎದುರಾಗಬಹುದಾದ, ರಾಜಕೀಯ ಅಸ್ಥಿರತೆಯ ಮುನ್ನೋಟ ದೇವೇಗೌಡ ಅಂಡ್ ಸನ್ಸ್ಗೇ ಕಣ್ಣ ಮುಂದೆ ಬಂದು ಬಿಟ್ಟಿದೆ… ಹಾಗಾಗಿ ಡಿಕೆಶಿಯ ಆಟವನ್ನ ಕಟ್ ಮಾಡಲೇಬೇಕೆಂಬ ಹಠ ಸಹಜವಾಗಿಯೇ ಬಂದAತಿದೆ.. ಅದಕ್ಕಾಗಿ ಡಿಕೆಶಿಯನ್ನ ಕಟ್ಟಿ ಹಾಕಲು ಇಳಿಯ ವಯಸ್ಸಿನಲ್ಲೂ ದೊಡ್ಡಗೌಡರು ತಂತ್ರವನ್ನು, ರಾಜಕೀಯವಾಗಿ ಹೆಣೆಯುತ್ತಿದ್ದಾರಾ ಅನ್ನುವ ಹಿಂಟ್ ಸಿಕ್ತಿದೆ…
 
ಡಿಕೆಶಿಯನ್ನು ಮಟ್ಟ ಹಾಕಲು ನಡೆಯುತ್ತಿರುವ ಹುನ್ನಾರ ಸಫಲವಾಗುತ್ತಾ…?
ಜಗ್ಗದೇ, ಬಗ್ಗದೇ ಷಡ್ಯಂತ್ರಗಳನ್ನು ಮೆಟ್ಟಿ ನೀಲ್ತಾರಾ ಪವರ್‌ಫುಲ್ ಡಿಕೆಶಿ…?
 
ಡಿಕೆಶಿ ಅಂದ್ರೆನೇ ಹಾಗೆ… ಎಂಥೆAತಹ ಕಷ್ಟಕರವಾದ ಸಮಸ್ಯೆಗಳನ್ನು ಎದುರಿಸಿ ನಿಂತವರು…. ಕಾನೂನಾತ್ಮಕವಾಗಿ, ರಾಜಕೀಯ ಪ್ರೇರಿತವಾಗಿ ಅದೆನೇ ತೊಂದರೆ ಕೊಟ್ಟರೂ, ಇದ್ಯಾವುದಕ್ಕೂ ಡಿಕೆಶಿ ಜಗ್ಗಲೆ ಇಲ್ಲ, ಹೋರಾಟವನ್ನು ಮಾಡುತ್ತಾ, ಕೆಪಿಸಿಸಿ ಅಧ್ಯಕ್ಷ ಗಾದಿಯಿಂದ, ಡಿಸಿಎಂ ತನಕ ನಡೆದು ಬಂದಿದ್ದಾರೆ.. ಮತ್ತೇ ೨೦೨೪ರ ಲೋಕಸಮರಕ್ಕೂ ತಮ್ಮ ನಾಯಕತ್ವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ.. ದಳಪತಿಗಳು ಅಲ್ಲ, ಅವರ ಜೊತೆಗೆ ಯಾರೆ ಸಖ್ಯ ಬೆಳೆಸಿ ಬಂದರೂ, ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬುವ ಹುಮ್ಮಸ್ಸಿನಲ್ಲಿದ್ದಾರೆ…
 
ಆದ್ರೆ ಡಿಕೆಶಿಯ ಈ ಆತ್ಮವಿಶ್ವಾಸ, ಛಲ, ಇದ್ರ ಜೊತೆಗೆ ಈಗ ಕೈಯಲ್ಲಿ ಇರುವ ಅಧಿಕಾರ ಇವೆಲ್ಲವನ್ನು ಬಳಸಿಕೊಂಡೆ, ಎದುರಾಳಿಗಳಿಗೆ ಉತ್ತರ ಕೊಡಲು ಸನ್ನದ್ಧರಾಗುತ್ತಿದ್ದಾರೆ…. ತನ್ನ ಸಮುದಾಯದ ನಾಯಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ, ದಳಪತಿಗಳ ಕೋಟೆಯಲ್ಲಿ ಕಾಂಗ್ರೆಸ್‌ನ ಬಾವುಟವನ್ನು ಶಾಶ್ವತವಾಗಿ ಹಾರಿಸುವ ಹಠಕ್ಕೆ ಬಿದ್ದಿದ್ದಾರೆ…. ಬಹುಶಃ ದಳಪತಿಗಳಿಗೂ ಕೂಡ, ಡಿಕೆಶಿಯ ಆರ್ಭಟವನ್ನು ತಡೆಯೋದು ಕಷ್ಟವಾಗಬಹುದೆಂಬ ಆತಂಕ ಮೂಡಿರಬಹುದು… ಅದಕ್ಕಾಗಿ ಶತಯಗತಾಯ ದೊಡ್ಡಗೌಡರೇ ಅಖಾಡಕ್ಕೆ ಇಳಿದಂತೆ ಕಾಣ್ತಿದೆ……
 
ಡೆಲ್ಲಿಯಲ್ಲಿ ಬಿಜೆಪಿ ಸರ್ಕಾರವಿದೆ. ಹಾಗಾಗಿ ದಳಪತಿಗಳಿಗೆ ಇಲ್ಲಿನ ಕಾಂಗ್ರೆಸ್‌ನ್ನು ಎದುರಿಸಲು, ಮೈತ್ರಿ ಅನಿರ‍್ಯವಾಗಿದೆ.. ಇತ್ತಾ ಬಿಜೆಪಿಗೂ ಕೂಡ ಮೈತ್ರಿ ಅವಶ್ಯಕತೆ ಇದ್ದೆ ಇದೆ.. ಅದಕ್ಕಾಗಿ ಆಗಾಗ ಮೋದಿ ಅಂಡ ಅಮಿತ್‌ಶಾ ಭೇಟಿ ಮಾಡಿ ಬಂದ್ರೆ, ಡಿಕೆಶಿಗೂ ಭಯ ಹುಟ್ಟಿಸಬಹುದು, ಅದರ ಭಾಗವಾಗಿ ಕಾಂಗ್ರೆಸ್‌ಗೂ ಟಕ್ಕರ್ ನೀಡಬಹುದು ಅನ್ನೋದು ಜೆಡಿಎಸ್‌ನ ದೊಡ್ಡಗೌಡರ ಅಸಲಿ ಲೆಕ್ಕಾಚಾರ ಇದ್ದಿರಬಹುದು…..
 
ಆದರೇ ಡಿಕೆಶಿ ಇದಕ್ಕೆಲ್ಲಾ ಸೊಪ್ಪು ಹಾಕ್ತಾರಾ, ಅಷ್ಟೆಲ್ಲಾ ಭಯ ಪಡ್ತಾರಾ, ನೋ.. ಚಾನ್ಸ್ ಸೇ ಇಲ್ಲ, ಅದೆಂಥೆತಹ ಸನ್ನಿವೇಶಗಳನ್ನು ಎದುರಿಸಿಲ್ಲ, ಇಡಿ, ಐಟಿ, ಅದು ಇದು, ಅಬ್ಬಬ್ಬಾ ಜೈಲಿಗೇ ಹೋಗಿ ಬಂದರೂ, ಜಗ್ಗಲಿಲ್ಲ ಅಂದ ಮೇಲೆ ಕೈಯಲ್ಲಿ ಅಧಿಕಾರ, ರಾಜ್ಯದಲ್ಲಿ ಇವರದ್ದೇ ಸರ್ಕಾರ ಇದ್ದ ಮೇಲೆ ಎಲ್ಲದಕ್ಕೂ ಡೋಟ್‌ಕೇರ್ ಬಿಡಿ ಅನ್ನುವ ಮೈಂಡ್‌ಸೆಟ್‌ನಲ್ಲಿ ಡಿಕೆಶಿ ಇದ್ದೇ ಇರ್ತಾರೇ ಅಲ್ವೇ…?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ