ಜೈ ಶ್ರೀರಾಮ್ ಛೀ.. ರಾಮ ನಮ್ಮ ಶತ್ರು ಎಂದು ಡಿಎಂಕೆ ನಾಯಕ ಎ ರಾಜ ವಿವಾದ

Krishnaveni K

ಬುಧವಾರ, 6 ಮಾರ್ಚ್ 2024 (09:01 IST)
ಚೆನ್ನೈ: ಶ್ರೀರಾಮನ ಬಗ್ಗೆ ಇಂಡಿಯಾ ಒಕ್ಕೂಟದ ನಾಯಕರು ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಇದ್ದಾರೆ. ಇದೀಗ ಡಿಎಂಕೆ ನಾಯಕ ಎ ರಾಜ ಪ್ರಭು ಶ್ರೀರಾಮನ ಬಗ್ಗೆ ಅವಹೇಳನಕಾರೀ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.

ವಿಪಕ್ಷ ಇಂಡಿಯಾ ಒಕ್ಕೂಟ ಪಕ್ಷಗಳಲ್ಲಿ ಒಂದಾದ ಡಿಎಂಕೆ ನಾಯಕ ಎ ರಾಜ ಶ್ರೀರಾಮ ಛೀ.. ಈಡಿಯಟ್ ಎಂದಿದ್ದಲ್ಲದೆ ನಾನು ಶ್ರೀರಾಮನ ಶತ್ರು ಎಂದಿದ್ದಾರೆ. ರಾಮ ಮತ್ತು ರಾಮಾಯಣದಲ್ಲಿ ನನಗೆ ನಂಬಿಕೆಯೇ ಇಲ್ಲ ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನಾಲಿಗೆ ಹರಿಯಬಿಟ್ಟಿದ್ದಾರೆ. ಅವರ ಈ ಹೇಳಿಕೆಗಳನ್ನು ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಇದಕ್ಕೆ ಇಂಡಿಯಾ ಬ್ಲಾಕ್ ನ ನಾಯಕರು ಉತ್ತರಿಸಬೇಕು ಎಂದಿದೆ.

ತಮಿಳುನಾಡಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎ ರಾಜ ‘ನಾವು ಭಾರತ ಮಾತೆ, ಜೈ ಶ್ರೀರಾಮ ದೇವರು ಎಂದರೆ ಒಪ್ಪಲ್ಲ. ತಮಿಳುನಾಡು ಜನ ಇದನ್ನು ಒಪ್ಪಲ್ಲ. ರಾಮ ನಮ್ಮ ಶತ್ರು ಎನ್ನಿ. ರಾಮಾಯಣದಲ್ಲಿ ನಂಬಿಕೆಯಿಲ್ಲ ಎನ್ನಿ. ಶ್ರೀರಾಮ ನಮ್ಮ ದೇವರು ಎನ್ನುವವರು ಅಪರಾಧಿಗಳು. ಹಾಗೆ ಯಾರಾದರೂ ಹೇಳಿದರೆ ನಿಮ್ಮ ಜೈ ಶ್ರೀರಾಮ ಛೀ.. ಹಾಗೆ ಹೇಳುವವರು ಈಡಿಯಟ್ಸ್’ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

ಅಷ್ಟೇ ಅಲ್ಲ, ಭಾರತ ದೇಶವಲ್ಲ. ಬೇರೆ ಬೇರೆ ದೇಶಗಳನ್ನು ಹೊಂದಿರುವ ಉಪಖಂಡ ಎಂದೂ ಹೇಳಿಕೊಂಡಿದ್ದಾರೆ. ತಮಿಳು ಭಾಷೆ ಮಾತನಾಡುವ ತಮಿಳುನಾಡು ಒಂದು ರಾಷ್ಟ್ರ, ಮಲಯಾಳಂ ಮಾತನಾಡುವ ಕೇರಳ ಇನ್ನೊಂದು ದೇಶ, ಒಡಿಶ್ಶಿ ಮಾತನಾಡುವ ಒರಿಸ್ಸಾ ಇನ್ನೊಂದು ರಾಷ್ಟ್ರ. ಹೀಗೆ ಬೇರೆ ಬೇರೆ ಭಾಷೆ ಮಾತನಾಡುವ ಹಲವು ರಾಷ್ಟ್ರಗಳು ಸೇರಿದ ಉಪಖಂಡ ಭಾರತ ಎಂದೆಲ್ಲಾ ಬೇಕಾಬಿಟ್ಟಿ ಮಾತನಾಡಿದ್ದಾರೆ.

ಅವರ ಈ ವಿಡಿಯೋಗಳನ್ನು ಹಂಚಿಕೊಂಡ ಬಿಜೆಪಿ ಇದಕ್ಕೆ ಇಂಡಿಯಾ ಒಕ್ಕೂಟದ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಏನಂತಾರೆ? ಇನ್ನೊಂದು ಧರ್ಮವನ್ನು ಅವಹೇಳನ ಮಾಡುವುದು ಸಮಾನತೆಯೇ?  ಹಿಂದೂ ದೇವರನ್ನು ಪ್ರಶ್ನಿಸುವುದು, ಖಂಡಿಸುವುದೇ ಇಂಡಿಯಾ ಒಕ್ಕೂಟದ ನಾಯಕರ ಖಯಾಲಿಯಾಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ