Dinesh gundu rao: ಲಾಕ್ ಡೌನ್ ಮಾಡೋದು ನಿಮಗಿಷ್ಟಾನಾ, ನಾಳೆನೇ ಅನೌನ್ಸ್ ಮಾಡ್ತೀನಿ
ರಾಜ್ಯದಲ್ಲಿ ಈಗ ಮಹಾಮಾರಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಪತ್ರಕರ್ತರೊಬ್ಬರು ಈ ಹಿಂದೆ ಕೊರೋನಾ ಬಂದಾಗ ಸರ್ಕಾರ ನಿರ್ಲ್ಯಕ್ಷ ವಹಿಸಿದ್ದಕ್ಕೆ ಕೇಸ್ ಹೆಚ್ಚಾಯ್ತು. ಈಗ ಏನು ಕ್ರಮ ಕೈಗೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿರುವ ದಿನೇಶ್ ಗುಂಡೂರಾವ್, ಸದ್ಯಕ್ಕೆ ಭಯ ಬೇಕಾಗಿಲ್ಲ. ನಾವು ನಿರ್ಲ್ಯಕ್ಷ ವಹಿಸಿಲ್ಲ. ನಾವು ಈಗಾಗಲೇ ಟೆಕ್ನಿಕಲ್ ಕಮಿಟಿ ಮೀಟಿಂಗ್ ಮಾಡಿದ್ದೀವಿ. ಎರಡು ದಿನದಲ್ಲಿ ಹೆಚ್ಚುವರಿ ಟೆಸ್ಟ್ ಕಿಟ್ ಗಳು ಆಸ್ಪತ್ರೆಗಳಿಗೆ ಬರಲಿದೆ. ಯಾವುದಕ್ಕೂ ಭಯ ಪಡಬೇಕಾಗಿಲ್ಲ. ನಾವು ಏನು ಕ್ರಮ ಕೈಗೊಳ್ಳಬಹುದೋ ಅದೆಲ್ಲವನ್ನೂ ಮಾಡ್ತಿದ್ದೀವಿ. ಇನ್ನು, ಲಾಕ್ ಡೌನ್ ಮಾಡೋದು ನಿಮಗೆ ಇಷ್ಟ ಅಂದ್ರೆ ಹೇಳಿ. ನಾಳೆನೇ ಅನೌನ್ಸ್ ಮಾಡ್ತೀನಿ ಎಂದಿದ್ದಾರೆ.
ಸದ್ಯಕ್ಕೆ ಕೊವಿಡ್ ಆತಂಕಕಾರಿಯಾಗಿಲ್ಲ. ರಾಜ್ಯದ ಯಾವುದೇ ಭಾಗದಲ್ಲಿ ಓಡಾಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ಸಾಕು. ಇದರ ಹೊರತಾಗಿ ವಿನಾಕಾರಣ ಭಯ ಬೇಡ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.