ಟ್ಯಾಟೂ, ಲಿಪ್ ಸ್ಟಿಕ್, ಬಟಾಣಿಯಲ್ಲಿದೆ ಅಪಾಯ: ಕುಡಿಯುವ ನೀರಿನ ವರದಿಯಲ್ಲೂ ಇದೆ ಶಾಕಿಂಗ್ ವಿಚಾರ

Krishnaveni K

ಶನಿವಾರ, 1 ಮಾರ್ಚ್ 2025 (09:17 IST)
ಬೆಂಗಳೂರು: ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂಬ ವರದಿ ಬೆನ್ನಲ್ಲೇ ಆರೋಗ್ಯ ಇಲಾಖೆ ಟ್ಯಾಟೂ, ಲಿಪ್ ಸ್ಟಿಕ್, ಬಟಾಣಿ, ಕಲ್ಲಂಗಡಿ ಹಣ್ಣಿನಲ್ಲೂ ಹಾನಿಕಾರಕ ಅಂಶವಿದೆ ಎಂಬುದು ಬೆಳಕಿಗೆ ಬಂದಿದೆ. ಇದೀಗ ಸರ್ಕಾರ ನೀರಿನ ಸ್ಯಾಂಪಲ್ ಪರೀಕ್ಷೆ ನಡೆಸಿದ್ದು ವರದಿಗಾಗಿ ಕಾದಿದೆ.

ಬೆಂಗಳೂರಿನಲ್ಲಿ ಕೆಲವು ಹೋಟೆಲ್, ರೆಸ್ಟೋರೆಂಟ್, ಬೀದಿ ಬದಿ ವ್ಯಾಪಾರಿಗಳು ತಯಾರಿಸುವ ಇಡ್ಲಿಯಲ್ಲಿ ಹಾನಿಕಾರಕ ಕಾರ್ಸೊಜೆನಿಕ್ ಅಂಶವಿದೆ ಎಂದು ಪತ್ತೆಯಾಗಿತ್ತು. ಇದು ಕ್ಯಾನ್ಸರ್ ರೋಗ ಹರಡುವ ಅಪಾಯ ಹೊಂದಿದೆ. ಹೀಗಾಗಿ ಹೋಟೆಲ್ ಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಕೆ ನಿಷೇಧಿಸಲಾಗಿದೆ.

ಟ್ಯಾಟೂ ಮಸಿಯಲ್ಲಿ 22 ಲೋಹದಂಶ ಪತ್ತೆಯಾಗಿದೆ. ಇದೂ ಕೂಡಾ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಬಟಾಣಿಯಲ್ಲಿ ಕೃತಕ ಬಣ್ಣಗಳ ಬಳಕೆ ಮಾಡಲಾಗುತ್ತಿದೆ. ಕಲ್ಲಂಗಡಿ ಹಣ್ಣಿಗೂ ರಾಸಾಯನಿಕ ಮಿಕ್ಸ್ ಮಾಡಲಾಗುತ್ತಿದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವರದಿಯಲ್ಲಿ ಕಂಡುಬಂದಿದೆ. ಇಂತಹ ವಸ್ತುಗಳ ತಯಾರಿಗೆ ಸೂಕ್ತ ಮಾನದಂಡ ರೂಪಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಟ್ಯಾಟೂ ಇಂಕ್: ಸೆಲೆನಿಯಮ್ ಸೇರಿ 22 ಲೋಹ ಅಂಶ ಪತ್ತೆಯಾಗಿದೆ. ಇದರಿಂದ ಚರ್ಮ ರೋಗ, ಸೋಂಕು, ವೈರಸ್, ಶಿಲೀಂಧ್ರ ಸೋಂಕು ಬರುವ ಸಾಧ್ಯತೆಯಿದೆ.

ಬಟಾಣಿ, ಕೇಕ್: ಕೇಕ್ 12 ಮಾದರಿ ಹಾಗೂ ಬಟಾಣಿಯ 26 ಮಾದರಿಗಳಲ್ಲಿ ಅಸರಕ್ಷಿತ ಬಣ್ಣ ಪತ್ತೆಯಾಗಿದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಕಲ್ಲಂಗಡಿ ಹಣ್ಣು: ಹಣ್ಣು ಕೆಂಪಾಗಿ ಕಾಣಲು ರಾಸಾಯನಿಕ ಬಳಕೆ. ಇದು ಆರೋಗ್ಯಕ್ಕೆ ಹಾನಿಕಾರಕ.

ಲಿಪ್ ಸ್ಟಿಕ್: ಲಿಪ್ ಸ್ಟಿಕ್ ಮಾತ್ರವಲ್ಲದೆ 262 ಕಾಂತಿ ವರ್ಧಕಗಳಲ್ಲಿ 242 ರ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ. ಇದರಿಂದ ಚರ್ಮ ರೋಗ ಬರಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ