ಬುಟ್ಟಿಯೊಳಗಿನ ಹಾವು ಬಿಡ್ತೀವಿ ಎಂದು ಹೆದರಿಸುವ ಬದಲು ತನಿಖೆ ನಡೆಸಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸರ್ಕಾರಕ್ಕೆ ಸವಾಲು ಹಾಕಿದಾರೆ.ಸದನದಲ್ಲಿ ಈ ಸರ್ಕಾರದ ಹಗರಣಗಳ ಬಗ್ಗೆ ನಾವು ಪ್ರಶ್ನೆ ಮಾಡುವುದರಿಂದ BJPಯವರಿಗೆ ಮೈ ಚಳಿ ಹುಟ್ಟಿಸಿದೆ.ಹಾಗಾಗಿ ಅರ್ಕಾವತಿ ರಿ-ಡೂ ಪ್ರಕರಣದ ತನಿಖೆಯ ಬಗ್ಗೆ ಮಾತಾಡುತ್ತಿದ್ದಾರೆ.ಸರ್ಕಾರ ಅವರದ್ದೇ ಅಲ್ಲವೇ?ಬ್ಲಾಕ್‌ಮೇಲ್ ಮಾಡಿದರೆ ಹೆದರುವವರು ಯಾರು?ಇಂದಿನಿಂದ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗುತ್ತಿದೆ.ಮೊನ್ನೆಯಷ್ಟೇ ದೊಡ್ಡಬಳ್ಳಾಪುರದಲ್ಲಿ ಖಾಲಿ ಕುರ್ಚಿಗಳ ಎದುರು 'ಜನ ಸ್ಪಂದನ'ಯಾತ್ರೆ ಎಂಬ ಪ್ಲಾಫ್ ಶೋ ನಡೆಸಿರುವ BJPಯವರು ಇಂದು ಸದನದಲ್ಲಿ ಉತ್ತರಿಸಲೇಬೇಕಾದ ಅನೇಕ ಪ್ರಶ್ನೆಗಳಿವೆ.ಜನರಿಗೆ ಈ ಸರ್ಕಾರ ಯಾವ ಬಗ್ಗೆ ಸ್ಪಂದಿಸಿದೆ ಎಂದು ಸದನದಲ್ಲಿ ಹೇಳಲಿ ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.