ನೆಹರೂ ಭಾವಚಿತ್ರ ಕೈಬಿಟ್ಟಿದಕ್ಕೆ ಬೊಮ್ಮಾಯಿ ವಿರುದ್ಧ ದಿನೇಶ್ ಗುಂಡೂರಾವ್ ಆಕ್ರೋಶ

ಭಾನುವಾರ, 14 ಆಗಸ್ಟ್ 2022 (19:58 IST)
ಸರ್ಕಾರಿ ಜಾಹಿರಾತಿನಲ್ಲಿ ನೆಹರು ಫೋಟೋ ಕೈಬಿಟ್ಟಿದರಿಂದ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದಾರೆ.ಸ್ವಾತಂತ್ರ್ಯ ಅಮೃತಮಹೋತ್ಸವ ದ ಪ್ರಯುಕ್ತ ರಾಜ್ಯ ಸರ್ಕಾರ ಪ್ರಕಟಿಸಿರುವ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರೂ ಹೆಸರೇ ಇಲ್ಲ.ಇದೆಂತಾ ಕೀಳು ಮಟ್ಟದ ಮನಃಸ್ಥಿತಿ‌ ಬಿಜೆಪಿಯವರೇ?ನೆಹರು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲವೇ? ತಮ್ಮ ಬದುಕಿನ ಸುದೀರ್ಘ 9 ವರ್ಷಗಳನ್ನು ಸೆರೆವಾಸದಲ್ಲಿ ಕಳೆಯಲಿಲ್ಲವೇ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ.ಜಾಹೀರಾತಿನಲ್ಲಿ‌ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ದಯಾಭಿಕ್ಷೆಯನ್ನ ಕೋರಿದ ಸಾವರ್ಕರ್‌ಗೆ ಸ್ಥಾನವಿದೆ.ಆದರೆ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ನೆಹರೂರರವರನ್ನು ಹೊರಗಿಡಲಾಗಿದೆ.ಇದು ಬೊಮ್ಮಾಯಿಯವರ ರಾಜಕೀಯ ದ್ವೇಷದ ವಿಕೃತ ನಡೆಯಾಗಿದೆ. RSS ನವರನ್ನು ಮೆಚ್ಚಿಸಿ ಸಿಎಂ ಕುರ್ಚಿ ಉಳಿಸಿಕೊಳ್ಳಲು ಈ ವಿಕೃತವೇ ಮಾನ್ಯ ಬೊಮ್ಮಾಯಿಯವರೆ?RSS ಕೋಮು ರಾಜಕಾರಣವನ್ನು ತಮ್ಮ ಜಾತ್ಯಾತೀತತೆ ಹಾಗೂ ಮಾನವತಾ ಸಿದ್ದಾಂತದಿಂದ ಜವಾಹರ್ ಲಾಲ್ ನೆಹರು ವಿರೋಧಿಸಿದ್ದರು.ಹಾಗಾಗಿ ನೆಹರೂ ಬಗ್ಗೆ RSS ಆಗಿಂದಲೂ ದ್ವೇಷ ಕಾರುತ್ತಿದೆ.ಆದರೆ ಬೊಮ್ಮಾಯಿಯವರೆ ನೀವು ಜನತಾ ಪರಿವಾರದದವರು.ನಿಮಗ್ಯಾಕೆ‌ ನೆಹರೂ ಮೇಲೆ ದ್ವೇಷ?ನಿಮ್ಮ ನಡೆಯಿಂದ ನಿಮ್ಮ ತಂದೆಯ ಆತ್ಮವೂ ಕನಲಿ ಹೋಗುವುದಿಲ್ಲವೆ?ಬೊಮ್ಮಾಯಿಯವರೆ RSS ಗುಲಾಮಗಿರಿಗೆ ಬಿದ್ದು ನೆಹರೂರಂತಹ ಇತಿಹಾಸ ಪುರುಷರನ್ನು ದ್ವೇಷಿಸಬೇಡಿ.ಭಾರತದ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ‌ ನೆಹರೂರವರ ಹೋರಾಟ ಮತ್ತು ತ್ಯಾಗ ಮರೆಯಲಾಗದ ಅಧ್ಯಾಯ ಎಂದು  ದಿನೇಶ್ ಗುಂಡೂರಾವ್  ಅಸಾಮಾಧಾನ ಹೊರಹಾಕಿದ್ದಾರೆ‌.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ