ಕೋರ್ಟ್ ಮೊರೆ ಹೋದ ಸಚಿವರ ಬಗ್ಗೆ ದಿನೇಶ್ ಕಲ್ಲಳ್ಳಿ ಪ್ರತಿಕ್ರಿಯೆ

ಭಾನುವಾರ, 7 ಮಾರ್ಚ್ 2021 (10:07 IST)
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ ನಾಗರಿಕ ಹಕ್ಕು ಹೋರಾಟಗಾರ ದಿನೇಶ್ ಕಲ್ಲಳ್ಳಿ ಇದೀಗ ಕೋರ್ಟ್ ಮೊರೆ ಹೋದ ಸಚಿವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.


ತಮ್ಮ ವಿರುದ್ಧ ಆಕ್ಷೇಪಾರ್ಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ಆರು ಮಂದಿ ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದು, ಮಾಧ‍್ಯಮಗಳ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ. ಈ ಬಗ್ಗೆ ದಿನೇಶ್ ಕಲ್ಲಳ್ಳಿ ಹೇಳಿಕೆ ನೀಡಿದ್ದಾರೆ.

ರಾಜ್ಯದ ಆರು ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದ್ದು ಯಾಕೆಂದು ನನಗೆ ಗೊತ್ತಿಲ್ಲ. ನಾನು ಈ ಮೊದಲು ಇನ್ನೂ ಹಲವರ ಅಕ್ರಮಕ್ಕೆ ಸಂಬಂಧಪಟ್ಟ ಮಾಹಿತಿಯಿದೆ ಎಂದಿದ್ದೆ. ಆದರೆ ಈ ಸಚಿವರ ಹೆಸರು ಹೇಳಿರಲಿಲ್ಲ.  ಇವರು ಯಾವ ಹಂತದಲ್ಲಿ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದು ದಿನೇಶ್ ಕಲ್ಲಳ್ಳಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ