ಭಕ್ತರಿಗೆ ಎರಡು ಲಕ್ಷ ಲಾಡುಗಳ ವಿತರಣೆ
ಮೈಸೂರಿನ ವಿಜಯನಗರದಲ್ಲಿರುವ ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಸಂಭ್ರಮ ಮನೆ ಮಾಡಿದೆ. 2023 ವರ್ಷವನ್ನ ಸಿಹಿ ವಿತರಿಸುವ ಮೂಲ ಬರಮಾಡಿಕೊಳ್ಳಲಾಗುತ್ತಿದೆ. ದೇವಾಲಯಕ್ಕೆ ಬರಯವ ಭಕ್ತರಿಗೆ ತಿರುಪತಿ ಮಾದರಿ ಲಡ್ಡು ವಿತರಿಸುವ ಕಾರ್ಯ ಆರಂಭವಾಗಿದೆ. ಎರಡು ಲಕ್ಷ ಲಾಡುಗಳು ತಯಾರಾಗಿದ್ದು ಭಕ್ತರಿಗೆ ವಿತರಿಸಲಾಗುತ್ತಿದೆ. ಮುಂಜಾನೆ 4 ಗಂಟೆಗೆ ಶ್ರೀ ಭಾಷ್ಯಂ ಸ್ವಾಮೀಜಿರವರು ಲಾಡು ವಿತರಣೆಗೆ ಚಾಲನೆ ನೀಡಿದರು. ಮುಂಜಾನೆ ವಿಶೇಷ ಅಭಿಷೇಕ,ಪೂಜೆಗಳು ನೆರವೇರಿದ ನಂತರ ಪ್ರಸಾದ ವಿತರಣೆಗೆ ಚಾಲನೆ ನೀಡಲಾಯಿತು. ದೇವಾಲಯಕ್ಕೆ ಬಂದ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. 150 ಗ್ರಾಂ ತೂಕದ 2 ಲಕ್ಷ ಲಾಡುಗಳು 2 ಕೆ.ಜಿ.ತೂಕದ 10 ಸಾವಿರ ಲಾಡುಗಳನ್ನ ವಿತರಿಸಲಾಯಿತು.