ಗುಂಡು ಹಾರಿಸಿದ ವ್ಯಕ್ತಿ ಸಾವು

ಭಾನುವಾರ, 1 ಜನವರಿ 2023 (19:09 IST)
ಹೊಸ ವರ್ಷಾಚರಣೆ ವೇಳೆ ಅಚಾತುರ್ಯ ನಡೆದಿದೆ. ಗಾಳಿಯಲ್ಲಿ ಗುಂಡು ಹಾರಿಸಲು ಮುಂದಾದಾಗ ಅವಘಡ ಸಂಭವಿಸಿದ್ದು. ವ್ಯಕ್ತಿಗೆ ಗುಂಡು ತಗುಲಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ವಿದ್ಯಾನಗರದಲ್ಲಿ ನಡೆದಿದೆ. ಗೋಪಾಲ್ ಗ್ಲಾಸ್ ಹೌಸ್ ಮಾಲೀಕ ಮಂಜುನಾಥ್ ಓಲೇಕರ್ ಮೃತ ದುರ್ದೈವಿಯಾಗಿದ್ದಾನೆ. 12 ಗಂಟೆ ಸರಿಯಾಗಿ ಗನ್ ಫೈಯರ್ ಮಾಡಿದ್ದ ಮಂಜುನಾಥ್. ಮಿಸ್ ಆದ ಏರ್​ಫೈರ್ ವ್ಯಕ್ತಿಗೆ ತಗುಲಿದೆ. ಪಾರ್ಟಿ ಮಾಡುತ್ತಿದ್ದ ಯುವಕ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರು .ಈ ಘಟನೆ ನಡೆದ ಬಳಿಕ ಗನ್ ಫೈಯರ್ ಮಾಡಿದ ಮಂಜುನಾಥ್​ಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ