ಇಂದು ಇಡಿ ಕೋರ್ಟ್ ನಲ್ಲಿ ಡಿಕೆ ಶಿವಕುಮಾರ್ ಭವಿಷ್ಯ ನಿರ್ಧಾರ

ಗುರುವಾರ, 19 ಸೆಪ್ಟಂಬರ್ 2019 (10:12 IST)
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಶಾಸಕ ಡಿಕೆ ಶಿವಕುಮಾರ್ ಜಾಮೀನು ಅರ್ಜಿಯ ವಿಚಾರಣೆ ಇಂದು ವಿಶೇಷ ಕೋರ್ಟ್ ನಲ್ಲಿ ನಡೆಯಲಿದೆ.


ನಿನ್ನೆಯೇ ಡಿಕೆಶಿ ಜಾಮೀನು ಅರ್ಜಿ ವಿಚಾರಣೆಯಾಗಬೇಕಿತ್ತು. ಆದರೆ ಇಡಿ ಪರ ವಕೀಲರು ಗೈರಾಗಿದ್ದರಿಂದ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿದೆ. ಈ ನಡುವೆ ಅವರ ಬಂಧನ ಅವಧಿಯನ್ನು ಅಕ್ಟೋಬರ್ 1 ರವರೆಗೆ ಮುಂದುವರಿಸಲಾಗಿತ್ತು.

ಇದು ಡಿಕೆಶಿಯನ್ನು ಹತಾಶೆಗೆ ದೂಡಿದೆ ಎನ್ನಲಾಗಿದೆ. ನಾನು ಘೋರ ಪ್ರಕರಣದಲ್ಲಿ ಬಂಧಿತನಾದವನು ಅಲ್ಲ. ಹೀಗಿದ್ದರೂ ನನ್ನ ಬಂಧನ ಅವಧಿಯನ್ನು ಅಂತ್ಯವಿಲ್ಲದೇ ವಿಸ್ತರಿಸುತ್ತಿರುವುದು ಏತಕ್ಕೆ ಎಂದು ಡಿಕೆಶಿ ಹತಾಶೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಇಂದು ಅವರಿಗೆ ಜಾಮೀನು ಯಾಕೆ ನೀಡಬೇಕು ಎಂಬ ಕುರಿತಂತೆ ಅವರ ಪರ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ