ಹೌದಪ್ಪಾ ನನಗೆ ಮದ ಜಾಸ್ತಿ, ಛತ್ರಿ ಅಂತ ಎಲ್ರೀ ಹೇಳಿದ್ದೀನಿ: ಡಿಕೆ ಶಿವಕುಮಾರ್

Krishnaveni K

ಗುರುವಾರ, 20 ಮಾರ್ಚ್ 2025 (12:23 IST)
ಬೆಂಗಳೂರು: ಮಂಡ್ಯ ಜನರನ್ನು ಡಿಸಿಎಂ ಡಿಕೆ ಶಿವಕುಮಾರ್ ಛತ್ರಿಗಳು ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ನನಗೆ ಮದ ಜಾಸ್ತಿ ಎಂದಿದ್ದು, ಛತ್ರಿ ಅಂತ ಎಲ್ರೀ ಹೇಳಿದ್ದೀನಿ ಎಂದು ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ನಿನ್ನೆ ರಾಹುಲ್ ಗಾಂಧಿಯವರನ್ನು ಭೇಟಿಯಾದ ವಿಚಾರದ ಬಗ್ಗೆ ಮಾತನಾಡಿದರು. ಬೆಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣದ ಭೂಮಿ ಪೂಜೆಗೆ ಕರೆಯುವುದಕ್ಕೆ ಅವರನ್ನು ಭೇಟಿ ಮಾಡಿದ್ದೆ ಎಂದಿದ್ದಾರೆ.

ಬಳಿಕ ಮಾಧ್ಯಮಗಳು ಮಂಡ್ಯದವರನ್ನು ಛತ್ರಿ ಎಂದು ಕರೆದಿದ್ದೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಎಲ್ರೀ ನಾನು ಛತ್ರಿ ಎಂದು ಕರೆದಿದ್ದು, ಅವನೇನು ನೋಡಿದ್ನಾ? ಹೌದಪ್ಪ ನನಗೆ ಮದ ಜಾಸ್ತಿ ಏನಿವಾಗ?

ನನ್ನಿಷ್ಟ ನಾನು ನನ್ನ ಆತ್ಮೀಯರನ್ನು ಹೇಗಾದ್ರೂ ಕರೆಯುತ್ತೇನೆ. ಕಳ್ ನನ್ಮಗ ಅಂತೀನಿ. ಅದೆಲ್ಲಾ ಪ್ರೀತಿಯಿಂದ ನಮ್ಮ ಆಪ್ತರನ್ನು ಕರೆಯೋದು. ಛತ್ರಿಗಳು ಎಂದು ನಾನು ಕರೆದಿದ್ದೇನೆ ಎನ್ನುವುದು ಸುಳ್ಳು’ ಎಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ