ಮಂಡ್ಯದವರನ್ನು ಛತ್ರಿಗಳು ಎಂದ ಡಿಸಿಎಂ ಡಿಕೆ ಶಿವಕುಮಾರ್: ಅಧಿಕಾರ ಕೊಟ್ಟಿದ್ದಕ್ಕೆ ಸರಿಯಾಗಿ ಮಾಡಿದ್ರಿ ಎಂದ ಜನ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡುವಾಗ ಡಿಕೆ ಶಿವಕುಮಾರ್ ಮಂಡ್ಯದವ್ರು ಛತ್ರಿಗಳು ಎಂಬ ಪದ ಬಳಸಿದ್ದರು. ಇದು ಮಂಡ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಡಿಕೆಶಿ ವಿರುದ್ಧ ಸಾಕಷ್ಟು ಪೋಸ್ಟ್ ಮಾಡಲಾಗುತ್ತಿದೆ. ನಿಮಗೆ ಅಧಿಕಾರ ಕೊಟ್ಟವರೇ ನಾವು. ಮಂಡ್ಯದಲ್ಲೇ ಕಾಂಗ್ರೆಸ್ ಗೆ ಅತೀ ಹೆಚ್ಚು ಸ್ಥಾನ ಬಂದಿದ್ದು. ಈಗ ನಮ್ಮನ್ನೇ ಛತ್ರಿಗಳು ಅಂತೀರಾ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.