ಮುನಿರತ್ನನ ಯಾವುದಾದ್ರೂ ಆಸ್ಪತ್ರೆಗೆ ಸೇರಿಸೋಣ: ಡಿಕೆ ಶಿವಕುಮಾರ್

Krishnaveni K

ಶುಕ್ರವಾರ, 21 ಮಾರ್ಚ್ 2025 (11:01 IST)
ಬೆಂಗಳೂರು: ಸದನದಲ್ಲಿ ತಮ್ಮ ಹನಿಟ್ರ್ಯಾಪ್ ಆರೋಪ ಮಾಡಿದ ಬಿಜೆಪಿ ಶಾಸಕ ಮುನಿರತ್ನರನ್ನು ಯಾವುದಾದರೂ ಆಸ್ಪತ್ರೆಗೆ ಸೇರಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಇಂದು ತಿರುಗೇಟು ಕೊಟ್ಟಿದ್ದಾರೆ.

ನಿನ್ನೆ ಸದನದಲ್ಲಿ ತಮ್ಮ ಮೇಲಿನ ಸುಳ್ಳು ಅತ್ಯಾಚಾರ ಆರೋಪಕ್ಕೆಲ್ಲಾ ಡಿಕೆಶಿಯೇ ಕಾರಣ ಎಂದು ಮುನಿರತ್ನ ಹೇಳಿದ್ದರು. ಅಲ್ಲದೆ, ದೇವರ ಫೋಟೋಗಳನ್ನು ಹಿಡಿದು ಆಣೆ ಮಾಡಿ ಹೇಳ್ತೀನಿ ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ಟ್ರ್ಯಾಪ್ ಮಾಡಿದ್ದಾರೆ ಎಂದಿದ್ದರು.

ಅವರ ಈ ಹೇಳಿಕೆಗೆ ಇಂದು ಡಿಕೆ ಶಿವಕುಮಾರ್ ಮಾಧ್ಯಮಗಳ ಮುಂದೆ ತಿರುಗೇಟು ನೀಡಿದ್ದಾರೆ. ‘ಅವರ ಪಾರ್ಟಿಯವರಿಗೆ ಹೇಳಿ, ಮೊದಲು ಅವರನ್ನು ಯಾವುದಾದರೂ ಒಳ್ಳೆ ಆಸ್ಪತ್ರೆಲಿ ಚೆಕ್ ಮಾಡಿಸಿಕೊಳ್ಳಲಿ’ ಎಂದು ಟಾಂಗ್ ಕೊಟ್ಟಿದ್ದಾರೆ.

ಬಳಿಕ ಮಾತನಾಡಿದ ಅವರು ‘ಇದೆಲ್ಲಾ ಯಾವುದೋ ಹಿಟ್ ಆಂಡ್ ರನ್ ಪ್ರಕರಣ ಆಗಿರಬಹುದು ಅಷ್ಟೇ. ನಾನಿ ನಿನ್ನೆನೇ ಹೇಳಿದ್ದೇನೆ, ಇದರ ಬಗ್ಗೆ ಕೂಡಲೇ ಪೊಲೀಸರಿಗೆ ದೂರು ಕೊಡಲಿ, ತನಿಖೆಯಾಗಲಿ ಎಂದೇ ಹೇಳಿದ್ದೇನೆ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ