ಬೆಂಗಳೂರು: ರಾಮನಗರ ಜಿಲ್ಲೆ ಮರುನಾಮಕರಣಕ್ಕೆ ಕೇಂದ್ರ ಸರ್ಕಾರ ತಡೆ ನೀಡಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಡಿಕೆ ಶಿವಕುಮಾರ್ ಮಗಳು ತಮ್ಮ ತಂದೆಗೆ ತಕ್ಕ ಮಗಳಂತೆ ಕಾಮೆಂಟ್ ಮಾಡಿದ್ದಾರೆ.
ಇಂದು ಗ್ಲೋಬಲ್ ಕಾಲೇಜು ಆಡಿಟೋರಿಯಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಐಶ್ವರ್ಯಾ ಡಿಕೆ ಶಿವಕುಮಾರ್ ಗೆ ರಾಮನಗರ ಜಿಲ್ಲೆ ಮರುನಾಮಕರಣ ಮಾಡುವ ಡಿಕೆಶಿ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ತಡೆ ನೀಡಿರುವ ಬಗ್ಗೆ ಪ್ರಶ್ನೆ ಮಾಡಲಾಯಿತು.
ಅದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ನನ್ನ ಶಾಲೆ ಬಗ್ಗೆ ಮಾತನಾಡಬಹುದು. ಕರ್ನಾಟಕದ ಬಗ್ಗೆ ನಾನು ಏನು ಮಾತನಾಡಲಿ? ನನ್ನತ್ರ ಇರೋದು ಕೇವಲ 8,000 ಮಕ್ಕಳಿರೋದು. ನಮ್ಮಪ್ಪನ ಹತ್ರ 8 ಲಕ್ಷ ಜನ ಇದ್ದಾರೆ. ಆದರೆ ರಾಜಕೀಯದ ಬಗ್ಗೆ ಮಾತನಾಡುವ, ಕಾಮೆಂಟ್ ಮಾಡುವಷ್ಟು ದೊಡ್ಡವಳು ನಾನಲ್ಲ ಎಂದಿದ್ದಾರೆ.
ನಂಗೆ ಸದ್ಯಕ್ಕೆ ಇರುವ ಅವಕಾಶವನ್ನು ಹೇಗೆ ಬಳಸಿಕೊಳ್ಳಬಹುದು ಎಂದಷ್ಟೇ ನಾನು ಯೋಚಿಸುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯಕ್ಕೆ ಬರಬೇಕು ಎನ್ನುವ ಯಾವ ಯೋಚನೆಯೂ ಇಲ್ಲ ಎಂದಿದ್ದಾರೆ.