ಬೆಂಗಳೂರು: ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ಸಂಸ್ಥೆ ದೇಶದ ಶ್ರೀಮಂತ ಶಾಸಕರ ಪಟ್ಟಿ ಬಿಡುಗಡೆ ಮಾಡಿದ್ದು ಇದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಎರಡನೇ ಸ್ಥಾನದಲ್ಲಿದೆ. ಹಾಗಿದ್ದರೆ ಅವರ ಆಸ್ತಿ ಎಷ್ಟು ನೋಡಿ.
ಎಲ್ಲಾ ರಾಜ್ಯ, ಕೇಂದ್ರಾಡಳಿತ ಪ್ರದೇಶ ಸೇರಿ 4,092 ಶಾಸಕರ ಆಸ್ತಿ ಮೌಲ್ಯ ನೋಡಿ ಪಟ್ಟಿ ತಯಾರಿಸಲಾಗಿದೆ. ಈ ಪೈಕಿ ಟಾಪ್ 10 ರೊಳಗೆ ಕರ್ನಾಟಕದ ನಾಲ್ವರು ಶಾಸಕರಿದ್ದಾರೆ. ಇವರಲ್ಲಿ ಡಿಕೆ ಶಿವಕುಮಾರ್ ದೇಶಕ್ಕೆ ಎರಡನೇ ಸ್ಥಾನದಲ್ಲಿದ್ದಾರೆ.
ಡಿಕೆಶಿ ಹೊರತಾಗಿ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದ ಮತ್ತೊಬ್ಬ ಕರ್ನಾಟಕದ ಶಾಸಕ ಎಂದರೆ ಗೌರಿಬಿದನೂರು ಕ್ಷೇತ್ರದ ಶಾಸಕ ಕೆಎಚ್ ಪುಟ್ಟಸ್ವಾಮಿ ಗೌಡ. ಅವರು 3 ನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ 1,156 ಕೋಟಿ ರೂ.ಗಳ ಒಡೆಯ ಪ್ರಿಯಾ ಕೃಷ್ಣ ಮತ್ತು 10 ನೇ ಸ್ಥಾನದಲ್ಲಿರುವ ಭೈರತಿ ಸುರೇಶ್ 648 ಕೋಟಿ ರೂ.ಗಳನ್ನು ಹೊಂದಿದ್ದಾರೆ. ಕರ್ನಾಟಕ ಶಾಸಕರ ಒಟ್ಟು ಆಸ್ತಿ 14, 179 ಕೋಟಿ ರೂ.ಗಳಾಗಿದೆ.
ಡಿಕೆ ಶಿವಕುಮಾರ್ ಒಟ್ಟು 1,413 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಇನ್ನು ಪುಟ್ಟಸ್ವಾಮಿ ಗೌಡ 1,267 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ನಂ.1 ಸ್ಥಾನದಲ್ಲಿರುವವರು ಬಿಜೆಪಿ ಶಾಸಕ ಪರಾಗ್ ಶಾ. ಅವರು ಒಟ್ಟು 3,383 ಕೋಟಿರೂ. ಆಸ್ತಿ ಹೊಂದಿದ್ದಾರೆ.