ಅಧಿಕಾರ ಬೇಕಾದಾಗ ದೇವಾಲಯಕ್ಕೆ ಭೇಟಿ, ದುಡ್ಡೆಲ್ಲಾ ಮಸೀದಿ, ಚರ್ಚ್ ಗೆ: ಡಿಕೆ ಶಿವಕುಮಾರ್ ಗೆ ನೆಟ್ಟಿಗರ ಟಾಂಗ್

Krishnaveni K

ಸೋಮವಾರ, 20 ಜನವರಿ 2025 (12:09 IST)
ಬೆಂಗಳೂರು: ಬೆಳಗಾವಿಯಲ್ಲಿ ನಿನ್ನೆ ಕಪಿಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ಡಿಕೆ ಶಿವಕುಮಾರ್ ಬಗ್ಗೆ ನೆಟ್ಟಿಗರು ಟೀಕೆ ಮಾಡಿದ್ದಾರೆ. ಅಧಿಕಾರಕ್ಕಾಗುವಾಗ ದೇವಾಲಯಕ್ಕೆ ಬರ್ತೀರಿ, ದುಡ್ಡೆಲ್ಲಾ ಮಸೀದಿ, ಚರ್ಚ್ ಗೆ ಕೊಡ್ತೀರಿ ಎಂದು ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಕಾಮೆಂಟ್ ಮಾಡಿದ್ದಾರೆ.

ದಕ್ಷಿಣ ಕಾಶಿ ಖ್ಯಾತಿ ಕಪಿಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ನಿನ್ನೆ ಡಿಕೆ ಶಿವಕುಮಾರ್ ಶಿವಲಿಂಗಕ್ಕೆ ಕ್ಷೀರಾಭಿಷೇಕ ನೆರವೇರಿಸಿದ್ದರು. ಅದರ ವಿಡಿಯೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಕಳೆದ ಎರಡು ವಾರಗಳಲ್ಲಿ ಡಿಕೆ ಶಿವಕುಮಾರ್ ಅನೇಕ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದು, ಹೋಮ-ಹವನ, ಪೂಜೆ ಮಾಡುತ್ತಿದ್ದಾರೆ. ಇದರ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಸಿಎಂ ಸ್ಥಾನ ಸಿಗಲೆಂದೇ ಡಿಕೆಶಿ ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದು ಟೀಕೆ ವ್ಯಕ್ತವಾಗುತ್ತಿದೆ. ಆದರೆ ತಾನೊಬ್ಬ ದೈವ ಭಕ್ತ. ಹೀಗಾಗಿಯೇ ದೇವರ ಪೂಜೆ ಮಾಡುತ್ತಿದ್ದೇನೆ ಎಂದು ಡಿಕೆಶಿ ಸಮಜಾಯಿಷಿ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಡಿಕೆಶಿ ಪೋಸ್ಟ್ ಮಾಡಿದ ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಅಧಿಕಾರ ಬೇಕಾದಾಗ ಹಿಂದೂ ದೇವರ ನೆನಪಾಗುತ್ತದೆ. ದುಡ್ಡೆಲ್ಲವನ್ನೂ ಮಸೀದಿ, ಚರ್ಚ್ ಗೆ ಕೊಡ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಯಾಕೋ ಸಂಪೂರ್ಣ ಹಿಂದುತ್ವ ನಾಯಕರಾಗಿ ಬದಲಾಗುತ್ತಿದ್ದೀರಿ ಎನಿಸುತ್ತದೆ ಎಂದು ಟಾಂಗ್ ಕೊಟ್ಟಿದ್ದಾರೆ.

ಹರಹರ ಶ್ರೀ ಕಪಿಲೇಶ್ವರ!

ದಕ್ಷಿಣ ಕಾಶಿ ಖ್ಯಾತಿಯ ಬೆಳಗಾವಿಯ ಶ್ರೀ ಕಪಿಲೇಶ್ವರ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಕ್ಷಣಗಳು. pic.twitter.com/Rrirsp6DCl

— DK Shivakumar (@DKShivakumar) January 19, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ