ರಾಹುಲ್ ಗಾಂಧಿ ಮುಂದೆ ಇಡಿ, ಐಟಿ ಬೆದರಿಕೆ ಎಲ್ಲ ನಡೆಯಲ್ಲ: ಡಿಕೆ ಶಿವಕುಮಾರ್

Krishnaveni K

ಮಂಗಳವಾರ, 13 ಆಗಸ್ಟ್ 2024 (15:20 IST)
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಇಡಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಇಂತಹದ್ದಕ್ಕೆಲ್ಲಾ ಅವರು ಹೆದರಲ್ಲ ಎಂದಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ರಾಹುಲ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಮೇಲಿದೆ. ಈ ಪ್ರಕರಣದ ಬಗ್ಗೆ ಈಗಾಗಲೇ ರಾಹುಲ್ ಮತ್ತು ಸೋನಿಯಾ ಎರಡು ವರ್ಷಗಳ ಹಿಂದೆ ಇಡಿ ಅಧಿಕಾರಿಗಳಿಂದ ತನಿಖೆಗೊಳಗಾಗಿದ್ದರು. ಆಗ ಕಾಂಗ್ರೆಸ್ ಭಾರೀ ಪ್ರತಿಭಟನೆ ನಡೆಸಿತ್ತು.

ಇದೀಗ ಮತ್ತೊಮ್ಮೆ ಇಡಿ ಅಧಿಕಾರಿಗಳು ರಾಹುಲ್ ರನ್ನು ಪ್ರಶ್ನೆ ಮಾಡಲು ತಯಾರಿ ನಡೆಸಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಮೊದಲು ರಾಹುಲ್ ಗಾಂಧಿಯೇ ನನ್ನ ಮೇಲೆ ಸದ್ಯದಲ್ಲೇ ಇಡಿ ದಾಳಿಯಾಗಲಿದೆ. ಅದಕ್ಕೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು.

ಇದೀಗ ಇದರ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಇಡಿ, ಐಟಿ ಎಲ್ಲಾ ರಾಹುಲ್ ಗಾಂಧಿ ಬೇಕಾದಷ್ಟು ನೋಡಿದ್ದಾರೆ. ಇಂತಹದ್ದಕ್ಕೆಲ್ಲಾ ಅವರ ಹೆದರಲ್ಲ. ಎಂದಿದ್ದಾರೆ. ಆದರೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬೆದರಿಕೆ ಹಾಕುತ್ತಿರುವ ಸಿಪಿ ಯೋಗೇಶ್ವರ್ ಅವರನ್ನು ಇಡಿ, ಐಟಿ ದಾಳಿ ಮಾಡಿಸುತ್ತೇವೆ ಎಂದು ಹೆದರಿಸಿ ಮನೆಯಲ್ಲಿ ಕೂರಿಸಬಹುದು ಎಂದು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ