ಶ್ರೀರಾಮುಲು ಮೇಲೆ ಹರಿಹಾಯ್ದ ಡಿ.ಕೆ.ಶಿವಕುಮಾರ್

ಗುರುವಾರ, 18 ಅಕ್ಟೋಬರ್ 2018 (15:45 IST)
ಶ್ರೀರಾಮುಲು ಜಡ್ಜ್ ಆಗಿ ಅಪಾಯಿಂಟ್ ಆಗಿದ್ದಾರೆ. ಜೈಲಿಗೆ ಕಳಿಸೋದು ಯಾರು ಜಡ್ಜ್ ಅಲ್ವಾ? ಅಂತ ಸಚಿವ ಡಿ.ಕೆ.ಶಿವಕುಮಾರ್ ಅವರು ಬಿ.ಶ್ರೀರಾಮುಲು ವಿರುದ್ಧ ಹರಿಹಾಯ್ದಿದ್ದಾರೆ.

ಅಕ್ಕಾವ್ರನ್ನ ಪಾರ್ಲಿಮೆಂಟ್ ಗೆ ಕಳಿಸಲಿ. ನನ್ನನ್ನು ಜೈಲಿಗೆ ಕಳಿಸಲಿ. ಬಿ.ಎಸ್.ಯಡಿಯೂರಪ್ಪನವರು ಇದಕ್ಕೆ ಉತ್ತರ ಕೊಡಬೇಕು. ಶ್ರೀರಾಮುಲು ಜಡ್ಜ್ ಆಗಿ ಅಪಾಯಿಂಟ್ ಆಗಿದ್ದಾರೆ. ಜೈಲಿಗೆ ಕಳಿಸೋದು ಯಾರು ಜಡ್ಜ್ ಅಲ್ವಾ? ಹಂಗಾದ್ರೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಅವರ ಕೈಯಲ್ಲಿದೆ ಅಂದ ಹಾಗಾಯ್ತಲ್ಲ? ನನ್ನ ಜೈಲಿಗೆ ಕಳಿಸೋ ವಿಚಾರ ಮಾತಾಡ್ತಾರೆ ಅಂತಾದ್ರೆ ಅವರಿಗೆ ಆ ಅಧಿಕಾರ ಸಿಕ್ಕಿರಬೇಕಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಬಿ.ಶ್ರೀರಾಮುಲು ವಿರುದ್ಧ ಟೀಕೆ ಮಾಡಿದರು.

ಶ್ರೀರಾಮುಲು ಅವರು ಸಂಸದ, ಶಾಸಕರಾಗಿದ್ದವರು. ಅವರು ಈ ಬಗ್ಗೆ ಮಾತಾಡಬೇಕಾದ್ರೆ ಬಹುಶಃ ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೀತಾ ಇದೆ ಎಂದರು. ಈ ಹಿಂದೆ 10 ವರ್ಷ ಅಣ್ಣ ಅಕ್ಕ ಇಬ್ರೂ ಪಾರ್ಲಿಮೆಂಟ್ ಸದಸ್ಯರಾಗಿದ್ರು. ಆಗ ಅವರು ದೇಶದ ಒಳಿತಿಗೆ ಎಷ್ಟು ಪ್ರಶ್ನೆ ಕೇಳಿದ್ದಾರೆ? ಅದರ ಕುರಿತು ಒಂದು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಶ್ರೀರಾಮುಲು ಅಣ್ಣಾವ್ರಿಗೆ ವಿಶ್ವಾಸ ಇದ್ದಿದ್ರೆ, ಜನರಿಗೆ ಕೊಡುಗೆ ಕೊಟ್ಟಿದ್ದೀನಿ ಅಂತಿದ್ರೆ ಅವರು ಬಳ್ಳಾರಿ ಗ್ರಾಮೀಣದಲ್ಲೇ ಸ್ಫರ್ಧಿಸಬೇಕಿತ್ತು ಎಂದು ಗದಗನ ಲಕ್ಷ್ಮೇಶ್ವರ ಪಟ್ಟಣದಲ್ಲಿ ಸಚಿವ ಡಿ. ಕೆ. ಶಿವಕುಮಾರ್ ಭರ್ಜರಿ ಟಾಂಗ್ ನೀಡಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ