ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ

geetha

ಸೋಮವಾರ, 29 ಜನವರಿ 2024 (18:00 IST)
ಬೆಂಗಳೂರು-ಮಂಡ್ಯ ವಿಚಾರವಾಗಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ಎಲೆಕ್ಷನ್ ಹತ್ತಿರ ಬರ್ತಿದೆ.ಬಿಜೆಪಿಯವರು ರಾಜಕೀಯ ಮಾಡ್ತಾ ಇದ್ದಾರೆ.ಮಂಡ್ಯದಲ್ಲಿ ಬಿಜೆಪಿಗೆ ಬೇಸ್ ಇಲ್ಲ.ಬೇಸ್ ಮಾಡಿಕೊಳ್ಳಬೇಕು ಅದಕ್ಕೆ ಬೇಸ್ ಕ್ರೀಯೇಟ್ ಮಾಡೋದಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ.ಎಲ್ಲಾ ಕಡೆನೂ ಎಲ್ಲಾ ಸಂಘ ಸಂಸ್ಥೆಗಳು ಎಲ್ಲಾ ಪ್ಲಾಗ್ ಹಾಕೊಂಡು ತಿರುಗುತ್ತಾರೆ.

ಈ ದೇಶದ ಸಂವಿಧಾನ ಯಾಕೆ ಇರಬೇಕು?ಪಂಚಾಯತಿ ಅವರನ್ನ ಏನೋ ಒಂದು ಪರ್ಮಿಷನ್ ಕೇಳಿದ್ದಾರೆ.ಆ ಪ್ರಕಾರ ಮಾಡಬೇಕಿತ್ತು.ಸುಮ್ಮನೆ ಎತ್ತಿಕಟ್ಟಿ ಗಲಾಟೆ ಮಾಡಬೇಕು.ಅಶಾಂತಿ ಉಂಟು ಮಾಡಬೇಕು ಅಂತ ಪ್ರಯತ್ನ ಮಾಡ್ತಿದ್ದಾರೆ.ದೇಶ ಕಾನೂನು ಏನಿದೆ ಆ ಪ್ರಕಾರ ನಾವೆಲ್ಲ ನಡೆದುಕೊಳ್ಳಬೇಕು.ಬಿಜೆಪಿಯವರಿಗೆ ಬೇಸ್ ಇಲ್ಲ ಅದನ್ನ ಉಳಿಸಿಕೊಳ್ಳೋದಕ್ಕೆ ಪ್ರಯತ್ನ ಮಾಡ್ತಿದ್ದಾರೆ
 
ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ಎಂದು ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿದ ಶಿವಕುಮಾರ್‌ ಯಾರ್ರಿ ಹಿಂದು, ಫಸ್ಟ್ ನಾವೆಲ್ಲ ಭಾರತೀಯರು, ಭಾರತದ ಸಂವಿಧಾನ.ನಾನು ಫೋನ್ ಮಾಡಿ ಕೇಳಿದೆ .ಅಲ್ಲಿ ದಲಿತ ಸಂಘಟನೆ ಕೆಂಪೇಗೌಡ ಸಂಘಟನೆಯವರು ಕೇಳ್ತಿದ್ದಾರೆ.ಜೊತೆಗೆ‌ 25 ಜನರು ಕೇಳ್ತಿದ್ದಾರೆ ನಾವು ಬಾವುಟ ಹಾಕ್ತೀವಿ ಅಂತ ನಾವೆಲ್ಲ ಹಿಂದು ಅಲ್ವಾ? ಇವರು ಇಬ್ಬರೇನಾ ಹಿಂದು?ಮಂಡ್ಯದಲ್ಲಿರೋರೆಲ್ಲ ಹಿಂದು ಅಲ್ವಾ?ಸುಮ್ಮೆನೆ ಅಶಾಂತಿ ಮೂಡಿಸಲು ಪ್ರಯತ್ನ ಮಾಡ್ತಿದ್ದಾರೆ, ಮಾಡ್ಲಿ ಎಂದು ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ