ಕೆಲಸ ಮಾಡ್ತಿವೆ.ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಮಾಡಿಕೊಂಡ ಒಪ್ಪಂದ ಇದೇನಾ.? ಅಂತಾ ಸಿಟಿ ರವಿ ಪ್ರಶ್ನಿಸಿದ್ದಾರೆ.ಭಾರತವನ್ನು ಅರಾಜಕತೆ ಸೃಷ್ಟಿ ಮಾಡೋದಾ.?ನಿಮ್ಮ ಮೊಹಬತ್ ಇದೇನಾ.?ಭಾರತದ ಪ್ರಧಾನಿ ಜೊತೆ ತೋರಿಸದ ಪ್ರೀತಿ, ಚೈನಾ ಮೇಲೆ ಯಾಕೆ.?ನೀವು ಮಾಡಿಕೊಂಡ ಒಪ್ಪಂದ ಇದೇನಾ ಅಂತ ಅನುಮಾನ ಬರ್ತಿದೆ.ನ್ಯೂಯಾರ್ಕ್ ಟೈಮ್ಸ್ ವರದಿ ಆಧಾರದ ಮೇಲೆ ತನಿಖೆ ಆಗಬೇಕಿದೆ.ಭಾರತ ದುರ್ಬಲ ಮಾಡಲು ಯಾರೆಲ್ಲಾ ಹಣ ಪಡೆಯುತ್ತಿದ್ರು.?ತಕ್ಷಣವೇ ಕ್ರಮ ಕೈಗೊಳ್ಳಲು ತಕ್ಷಣ ಕ್ರಮ ವಹಿಸಬೇಕು ಅಂತಾ ಸಿ ಟಿ ರವಿ ತಾಕೀತು ಮಾಡಿದ್ದಾರೆ.
ಡಿಕೆಶಿ ಹೇಳಿಕೆ ವಿಚಾರವಾಗಿ 40% ಅಂತ ನಮ್ಮ ಮೇಲೆ ಆರೋಪ ಮಾಡಿದ್ರಿ.ನೀವು ಪ್ರಮಾಣಿಕರಿದ್ರೆ ಹಣ ಬಿಡುಗಡೆ ಮಾಡಿ.ಎಷ್ಟು ದಿನದಲ್ಲಿ ತನಿಖೆ ಮಾಡಿ ವರದಿ ಕೊಡಿ ಅಂತ ಹೇಳಿ.ಅದರ ಮೇಲೆ ಹಣ ಬಿಡುಗಡೆ ಮಾಡಿ.ಡಿಕೆಶಿ ಅವರನ್ನ ಹೆದರಿಸಲು ಸಾಧ್ಯವಿಲ್ಲ, ಅವರೇ ಬೇರೆಯವರನ್ನ ಹೆದರಿಸೋರು.ಕಂಟ್ರಾಕ್ಟರ್ಸ್ ಅವರನ್ನ ಹೆದರಿಸೋ ಕೆಲಸ ಮಾಡಬೇಡಿ.SIT ರಚನೆ ಮಾಡಿರೋದೇ ಬ್ಲಾಕ್ ಮೇಲ್ ಮಾಡೋದಕ್ಕೆ ಅಂತಾ ಸಿಟಿ ಡಿಕೆ ಶಿವಕುಮಾರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ.