ಶಾಸಕರ ಅಸಮಧಾನ ಶಮನಕ್ಕೆ ಅಖಾಡಕ್ಕಿಳಿದ ಸಿಎಂ..!

ಸೋಮವಾರ, 7 ಆಗಸ್ಟ್ 2023 (21:21 IST)
ಕಾಂಗ್ರೆಸ್ ವಲಯದಲ್ಲಿ ಅಸಮಧಾನದ ಹೊಗೆ ಹೆಚ್ಚಾಗ್ತಿರೋದು ಪದೇ ಪದೇ ಸಾಬೀತಾಗ್ತಿದೆ.. ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರ ಅಸಮದಾನ ಹಾಗೂ ಸಿಎಂಗೆ ಪತ್ರ ಸಾಕಷ್ಟು ಬರೆದಿರುವ ವಿಚಾರ ಕಾವು ಪಡೆದಿತ್ತು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯನ್ನ ಕರೆದು ಅಸಮದಾನಿತ ಶಾಸಕರ ಅಭಿಪ್ರಾಯವನ್ನ ಕೇಳಿ ಕೆಲ ಸಚಿವರಿಗೆ ಸಲಹೆ ಸೂಚನೆಯನ್ನ ಕೊಟ್ಟಿದ್ರು. ಆದ್ರು ಇದು ಕಡಿಮೆಯಾಗಿಲ್ಲಾ ಎಂಬ ವಿಚಾರವನ್ನ ಅರಿತ ಕಾಂಗ್ರೆಸ್ ಹೈಕಮಾಂಡ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯಲ್ಲಿ ಸಭೆಯನ್ನ ಮಾಡಿ ಸಿಎಂ ಹಾಗೂ ಡಿಸಿಎಂ ಸೇರಿದಂತೆ ಹಿರಿಯ ನಾಯಕರ ಅಭಿಪ್ರಾಯವನ್ನ ಪಡೆದ ನಂತರ ಇದಕ್ಕೆ ಫುಲ್ ಸ್ಟಾಪ್ ಹಾಕುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿವಕುಮಾರ್ ಗೆ ಸೂಚನೆ ನೀಡಿದ್ರು.

ಒಂದು ಕಡೆ ಅಸಮದಾನಿತ ಶಾಸಕರ ಪತ್ರದ ವಿಚಾರ ಹಾಗೂ ನಾಯಕರ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡ್ತಿದೆ. ಈ ಎಲ್ಲಾ ವಿಚಾರಗಳಿಗೆ ಫುಲ್ ಸ್ಟಾಪ್ ಹಾಕೊದಕ್ಕೆ ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆ ಸಿಎಂ ಹಾಗೂ ಡಿಸಿಎಂ ನೇತೃತ್ವದಲ್ಲಿ 6 ಜಿಲ್ಲೆಗಳ ಸಚಿವರು ಹಾಗೂ ಆಢಳಿತ ಪಕ್ಷದ ಶಾಸಕರ ಜೊತೆ ಸಿಎಂ ಹಾಗೂ ಡಿಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದ್ರು.ಸಿದ್ದರಾಮಯ್ಯ ನೇತೃತ್ವದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಸಲಾಯ್ತು. ಮೊದಲ‌ ಹಂತದಲ್ಲಿ ತುಮಕೂರು, ಯಾದಗಿರಿ, ಚಿತ್ರದುರ್ಗದ ಸಚಿವರು ಹಾಗೂ ಶಾಸಕರ ಜೊತೆ ಜಿಲ್ಲಾವಾರ ಸಭೆ ನಡೆಸಿದ್ರು ಸಿಎಂ‌ ಹಾಗೂ ಡಿಸಿಎಂ. ಶಾಸಕರ ಅಸಮದಾನಕ್ಕೆ ಕಾರಣಗಳ ಜೊತೆಗೆ ಸಚಿವರ ಕಾರ್ಯವೈಖರಿ ಬಗ್ಗೆ ಚರ್ಚೆ ಮಾಡಿದ್ರು.

ಇನ್ನೂ ಮೊದಲ ಹಂತದಲ್ಲಿ‌ ತುಮಕೂರು , ಯಾದಗಿರಿ ಹಾಗೂ ಚಿತ್ರದುರ್ಗದ ಶಾಸಕರ ಹಾಗೂ ಸಚಿವರ ಜೊತೆ ನಡೆಸಿದ್ರು. ಸಭೆ ಬಳಿಕ ಮಾತನಾಡಿದ ಕುಣಿಗಲ್ ಶಾಸಕ ಸಿಎಂ ಸಿದ್ದರಾಮಯ್ಯ ಜಿಲ್ಲಾವಾರು ಸಮಸ್ಯೆಗಳ ಬಗ್ಗೆ ಶಾಸಕರು, ಸಚಿವರು ಸೇರಿದಂತೆ ಉಸ್ತುವಾರಿ ಸಚಿವರ ಜೊತೆ ಚರ್ಚೆ ಮಾಡಿದ್ದಾರೆ.. ಅನುದಾನ ಸೇರಿದಂತೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಕಾರಾತ್ಮಕವಾಗಿ ಸಿಎಂ ಸ್ಪಂದಿಸಿದ್ದಾರೆ ಅಂತಾ ಮಾಹಿತಿ ನೀಡಿದ್ರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ