ಕೈ ಪಡೆ ಕೃಷ್ಣ ಯಾತ್ರೆಯನ್ನು ನಾನೇ ನೇತೃತ್ವ ವಹಿಸುತ್ತೇನೆ ಎಂದ ಡಿಕೆಶಿ
ಭಾನುವಾರ, 18 ಸೆಪ್ಟಂಬರ್ 2022 (12:20 IST)
ಮಂಡ್ಯ : ನಗರದ ಖಾಸಗಿ ಸಮುದಾಯ ಭವನದಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತೊಂದು ಪಾದಯಾತ್ರೆಯ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಮೇಕೆದಾಟು ಪಾದಯಾತ್ರೆ ಬಳಿಕ ಮತ್ತೊಂದು ಪಾದಯಾತ್ರೆಗೆ ಸಿದ್ಧತೆ ನಡೆಸುತ್ತಿರುವ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಬಳಿಕ ಕೃಷ್ಣ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ `ಕೃಷ್ಣ ಯಾತ್ರೆ ಹಮ್ಮಿಕೊಳ್ಳಲಾಗುತ್ತದೆ. ಈ ಬಗ್ಗೆ ಸ್ಥಳೀಯ ನಾಯಕರಿಗೂ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಕಾಸುಕೊಟ್ಟು ಯಾರನ್ನೂ ಕರೆತರಬೇಡಿ
7 ಸೀಟ್ ಗೆದ್ದಾಗ ದಳದವರು ಸ್ಥಳೀಯ ಸಂಸ್ಥೆ, ಪದವೀಧರರ ಕ್ಷೇತ್ರ ಗೇಲ್ಲೋಕೆ ಆಗಲಿಲ್ಲ. ನೀವೆಲ್ಲರೂ ಒಟ್ಟಾಗಿ ದುಡಿದಿದ್ದಕ್ಕೆ ಅದು ಸಾಧ್ಯವಾಯ್ತು. ಈ ಪಾದಯಾತ್ರೆಯಿಂದ ಸಂಘಟನೆಗೂ ಸಹಕಾರಿಯಾಗಲಿದೆ. ನಾಳೆಯಿಂದಲೇ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಸಂಘಟನೆ ಮಾಡಬೇಕು.
ಮಂಡ್ಯ ಜಿಲ್ಲೆಯಿಂದಲೇ ಕನಿಷ್ಠ 10 ಸಾವಿರ ಜನ ಬರಬೇಕು. ಆದರೆ ಕಾಸು ಕೊಟ್ಟು ಯಾರನ್ನೂ ಕರೆತರಬೇಡಿ, ವಾಹನ ವ್ಯವಸ್ಥೆ ಬೇಕಿದ್ರೆ ನಾವೇ ಮಾಡಿಕೊಡ್ತೇವೆ. ಬದ್ಧತೆ, ನಾಯಕತ್ವ ಇರೋರನ್ನ ಯಾತ್ರೆಗೆ ಕರೆತನ್ನಿ. ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಆನ್ ಲೈನ್ ನೋಂದಣಿ ಆರಂಭವಾಗಿದೆ. ಈ ಕೂಡಲೇ ನೋಂದಣಿ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.