ಆಫೀಸರ್ಸ್ ಗೆ ಖಡಕ್ ಸೂಚನೆ ಕೊಟ್ಟ ಡಿಕೆಶಿ

ಗುರುವಾರ, 8 ಜೂನ್ 2023 (19:00 IST)
ಮಳೆಗಾಲ ಆರಂಭದ ಹೊತ್ತಿನಲ್ಲಿಯೇ ಇದೇ ಮೊದಲ ಬಾರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ್ದಾರೆ. ಮಳೆಹಾನಿಗೆ ತುತ್ತಾಗುವ ಮಹಾದೇವಪುರ ವಲಯ ವ್ಯಾಪ್ತಿ ಪ್ರದೇಶಗಳಿಗೆ ಬಿಬಿಎಂಪಿ, ಜಲಮಂಡಳಿ, ನಮ್ಮ ಮೆಟ್ರೊ ಹಿರಿಯ ಅಧಿಕಾರಿಗಳ ಜೊತೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಬಿಎಂಟಿಸಿ ಎಸಿ ಬಸ್ ನಲ್ಲಿ ಯಮಲೂರು ಕೆರೆ, ಬೆಳ್ಳಂದೂರು ಕೆರೆ ಮತ್ತು ವರ್ತೂರು ಕೆರೆ, ಹೂಳೆತ್ತುವ ಜಾಗ, ಒಳಚರಂಡಿ, ಕಾಮಗಾರಿ ಜಾಗಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ್ರು.

ಮಳೆಗಾಲಕ್ಕೆ ತುತ್ತಾಗಿದ್ದ ಏರಿಯಾ ವರ್ತೂರಿನ ದೊಡ್ಡಕನ್ನಹಳ್ಳಿಯ ರೇನ್ಬೋವ್ ಡ್ರೈವ್ ವಸತಿ ಸಮುಚ್ಚಯ ಪ್ರದೇಶಕ್ಕೆ ಭೇಟಿ ನೀಡಿದ್ರು. ಅಲ್ಲಿಯ ಮುಂದಿನ ರಾಜಕಾಲುವೆ ನವೀಕರಣ ಕಾಮಗಾರಿ ಪರಿಶೀಲಿಸಿದ್ರು. ಈ ವೇಳೆ ಸಾಕಷ್ಟು ಟ್ರಾಫಿಕ್ ಜಾಮ್ ಕೂಡ ಆಗಿತ್ತು. ಮಳೆಗಾಲಕ್ಕೆ ರೆಡಿ ಆಗಬೇಕಿದೆ. ಒತ್ತುವರಿದಾರರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ.ಅವರು ಎಷ್ಟೇ ಪ್ರಭಾವಿಗಳಾದ್ರೂ ತಲೆ ಕೆಡಿಸಿಕೊಳ್ಳೊಲ್ಲ.ಅವರು ಕಾನೂನನ್ನು ಬೇರೆ ರೀತಿಯಲ್ಲಿ ಮಿಸ್ಯೂಸ್ ಮಾಡ್ಕೊಂಡ್ರೆ ನಮಗೂ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಗೊತ್ತಿದೆ ಎಂದು ಎಚ್ಚರಿಕೆ ನೀಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ