1200ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ಪೊಲೀಸ್ ಮೆಗಾ ರೇಡ್

ಗುರುವಾರ, 8 ಜೂನ್ 2023 (18:09 IST)
ಇವತ್ತು ಬೆಳ್ಳಂ ಬೆಳಗ್ಗೆಯೇ ನಗರದ ಎಲ್ಲಾ ರೌಡಿಗಳಿಗೆ ಬೆಂಗಳೂರು ಸಿಟಿ ಪೊಲೀಸರು ಶಾಕ್ ಕೊಟ್ಟಿದ್ರು.. ರಾತ್ರಿ  ಪಾರ್ಟಿಗೀರ್ಟಿ ಅಂತಾ ಮಾಡ್ಕೊಂಡು ನಿದ್ದೆ ಮಂಪರಿನಲ್ಲಿದ್ದ ರೌಡಿ ಆಸಾಮಿಗಳಿಗೆ ಪೊಲೀಸರು ಬರ್ತಾರೆ ಅನ್ನೋ ಸುಳಿವೇ ಇರ್ಲಿಲ್ಲ.. ಸೀಕ್ರೆಟ್ ಆಗಿಯೇ ಪ್ಲಾನ್ ಮಾಡಿಕೊಂಡಿದ್ದ ಪೊಲೀಸರು ನಗರದ ಎಂಟೂ ವಿಭಾಗಗಳಲ್ಲಿ ದಾಳಿ ನಡೆಸಿದ್ರು.. ಹೊಸ ಪೊಲೀಸ್ ಕಮಿಷನರ್ ದಯಾನಂದ್ ಸೂಚನೆಯಂತೆ ಮುಂಜಾನೆ ಸಾವಿರಾರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಯ್ತು.

ಇನ್ನು ಪೂರ್ವ ವಲಯದ ಈಶಾನ್ಯ, ಪೂರ್ವ, ಆಗ್ನೇಯ, ವೈಟ್ ಫಿಲ್ಡ್ ವಿಭಾಗದ 648ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿತ್ತು.. ದಾಳಿ ವೇಳೆ 1.1kg ಗಾಂಜಾ, ಎಂಟು ನಂಬರ್ ಪ್ಲೇಟ್ ಇಲ್ಲದ ವಾಹನಗಳು ಪತ್ತೆಯಾಗಿದ್ವು.. ಅಲ್ಲದೇ ಕೆಲ ಮಾರಕಾಸ್ತ್ರಗಳು, ಜಾಮೀನು ರಹಿತ ವಾರೆಂಟ್ ಇದ್ದರೂ ತಲೆ ಮರೆಸಿಕೊಂಡಿದ್ದ 34ಜನ ಆರೋಪಿಗಳು ಪತ್ತೆಯಾಗಿದ್ದು, ಠಾಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಓರ್ವನ ವಿರುದ್ಧ ಕೇಸ್ ದಾಖಲು ಮಾಡಲಾಗಿದ್ದು ,ಗರದಾದ್ಯಂತ ಇಂದು ರೌಡಿಗಳಿಗೆ ಪೊಲೀಸರು ಚಳಿ ಬಿಡಿಸಿದ್ದಾರೆ. ಕ್ರೈಂ ಆ್ಯಕ್ಟಿವಿಟೀಸ್ ಕಮ್ಮಿ ಮಾಡೋ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಾಚರಣೆ ಮುಂದುವರೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ