ಕೆಪಿಎಂಇ ವಿಧೇಯಕ ಜಾರಿಗೆ ತರಬೇಡಿ: ಸಿಎಂಗೆ ಪುತ್ರ ಯತೀಂದ್ರ ಸಲಹೆ

ಗುರುವಾರ, 16 ನವೆಂಬರ್ 2017 (13:55 IST)
ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಕೆಪಿಎಂಇ ವಿಧೇಯಕ ಜಾರಿಗೆ ತರಬೇಡಿ ಎಂದು ಡಾ.ಯತೀಂದ್ರ ತಂದೆ ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ.
 
ವೃತ್ತಿಯಲ್ಲಿ ವೈದ್ಯರಾಗಿರುವ ಯತೀಂದ್ರ, ವಿಧೇಯಕ ಜಾರಿಗೆ ತರುವುದರಿಂದ ಖಾಸಗಿ ವೈದ್ಯರು ಭಯದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವೈದ್ಯರು ಹಿಂಜರಿಯುತ್ತಾರೆ ಎಂದು ತಿಳಿಸಿದ್ದಾರೆ.
 
ಕೆಪಿಎಂಇ ಮಸೂದೆ ಖಾಸಗಿ ವೈದ್ಯರಿಗೆ ಕರಾಳಶಾಸನವಾಗಲಿದೆ. ಇಂತಹ ವಿಧೇಯಕ ಜಾರಿಗೆ ತರುವುದರಿಂದ ವೈದ್ಯರು ನಿರ್ಭಯರಾಗಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
ಖಾಸಗಿ ವೈದ್ಯರ ಮುಷ್ಕರದಿಂದಾಗಿ ರಾಜ್ಯದಾದ್ಯಂತ ರೋಗಿಗಳಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು ಹಲವಾರು ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ